ಸೌಂದರ್ಯ ಎಂದರೆ?

ನನ್ನ ಪ್ರಕಾರ ಸೌಂದರ್ಯ ಎನ್ನುವುದು ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗಿಲ್ಲ, ಆಂತರಿಕ ಸೌಂದರ್ಯ ಕೂಡ ಅಷ್ಟೇ ಮಹತ್ವವನ್ನು ಹೊಂದಿದೆ. ನಮ್ಮ ಆಂತರಿಕ ಸೌಂದರ್ಯದಿಂದ ನೋಡಿದರೆ ಎಲ್ಲರೂ ಸುಂದರವಾಗಿ ಕಾಣುತ್ತದೆ. ಈಗಿನ ಕಾಲದಲ್ಲಿ ಮೇಲಿನ ಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಆಂತರಿಕ ಸೌಂದರ್ಯ ಯಾರಿಗೂ ಕೂಡ ಬೇಡ, ಕಾಲಸರಿದಂತೆ ಬಾಹ್ಯ ಸೌಂದರ್ಯ ಸರಿದು ಹೋಗುತ್ತದೆ ಆದರೆ ನಮ್ಮ ಆಂತರಿಕವಾಗಿ ನಾವು ನಮ್ಮ ಸೌಂದರ್ಯವನ್ನು ಚೆನ್ನಾಗ್ ಇರಿಸಿಕೊಂಡರೆ ಅದು ಎಂದಿಗೂ ಮಾಸುವುದಿಲ್ಲ. ಖಂಡಿತ ಸೌಂದರ್ಯ ಬಾಹ್ಯ ಸೌಂದರ್ಯವೇ ಮುಖ್ಯ, ಆದರೆ ಆಂತರಿಕವಾಗಿContinue reading “ಸೌಂದರ್ಯ ಎಂದರೆ?”

ಪರ್ಫ್ಯೂಮ್ (ಸುಗಂಧ ದ್ರವ್ಯ)

ಈಗಿನ ಕಾಲದಲ್ಲಿ ಎಲ್ಲರೂ ಕೂಡ ಪರ್ಫ್ಯೂಮ್ ಅನ್ನೂ ಬಳಸುತ್ತಾಳೆ, ಇದು ಹೆಚ್ಚು ಉತ್ಸುಕರಾಗಿರಲು ಸಹಾಯ ಮಾಡುತ್ತದೆ. ಇದು ಎಲ್ಲರಿಗೂ ಪ್ರಿಯವಾದ ವಸ್ತುವಾಗಿದ್ದು ಇದನ್ನು ಮೊಟ್ಟಮೊದಲ ಬಾರಿಗೆ ಮೆಸಪಟೋಮಿಯಾದ 4000 ವರ್ಷಗಳ ಹಿಂದೆ ತಯಾರಿಸಲಾಗಿತ್ತು.ಇದನ್ನು ಪ್ರಾರ್ಥನೆ, ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲು ಬಳಸುತ್ತಿದ್ದರು. ಇದನ್ನು ಮೊದಲ ಬಾರಿಗೆ ಶುರು ಮೂಡಿದ್ದು ಮೆಸೋಪೋಟೋಮಿಯ, ಈಜಿಪ್ಟ್, ಸಿಂಧೂ ನಾಗರಿಕತೆ ಹಾಗೂ ಪ್ರಾಚೀನ ಕಾಲದ ಚೀನಾ. ಸಿಂಧೂ ನಾಗರಿಕತೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದರು (3300BC-1300BC). ಮೆಸೋಪೋಟಮಿಯ ದಲ್ಲಿ ಬಳಸಲಾಗುತ್ತಿದ್ದ 4000 ವರ್ಷಗಳ ಹಳೆಯ ಪರ್ಫ್ಯೂಮ್Continue reading “ಪರ್ಫ್ಯೂಮ್ (ಸುಗಂಧ ದ್ರವ್ಯ)”

ಫ್ಯಾಶನ್ ವೀಕ್ ಫ್ಯಾಶನ್ ಡಿಸೈನರ್ ಗಳಿಗೆ ಬಹುಮುಖ್ಯ…

ಫ್ಯಾಶನ್ ವೀಕ್ ಎಂಬ ಪದ ಎಲ್ಲರಿಗೂ ತಿಳಿದೇ ಇರುತ್ತದೆ. ಫ್ಯಾಶನ್ ವೀಕ್ ಎನ್ನುವುದು ಫ್ಯಾಶನ್ ಇಂಡಸ್ಟ್ರಿಯ ಬಹುದೊಡ್ಡ ಈವೆಂಟ್ ಆಗಿದ್ದು, ಇದು ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸುಮಾರು ಒಂದು ವಾರದವರೆಗೆ ನಡೆಯುತ್ತದೆ. ಇದರಲ್ಲಿ ಫ್ಯಾಶನ್ ಡಿಸೈನರ್ ಗಳು ತಾವು ಡಿಸೈನ್ ಮಾಡಿದಂತಹ ಉಡುಪುಗಳನ್ನು ರನ್ ವೇ ಮೂಲಕ ಖರೀದಿದಾರರು ಮತ್ತು ಮಾಧ್ಯಮಗಳಿಗೆ ಪ್ರದರ್ಶಿಸುತ್ತಾರೆ. ಫ್ಯಾಶನ್ ವೀಕ್ ಎನ್ನುವುದು ಫ್ಯಾಶನ್ ಡಿಸೈನರ್ ಗಳಿಗೆ ಮುಖ್ಯವಾದ ಈವೆಂಟ್. ಏಕೆಂದರೆ, ಇದರ ಮೂಲಕ ತಮ್ಮ ನವನವೀನವಾದ ಡಿಸೈನರ್ ಉಡುಪುಗಳನ್ನುContinue reading “ಫ್ಯಾಶನ್ ವೀಕ್ ಫ್ಯಾಶನ್ ಡಿಸೈನರ್ ಗಳಿಗೆ ಬಹುಮುಖ್ಯ…”

ಜೀವನಕ್ಕೆ ಫ್ಯಾಶನ್ ಬೇಕಾ?

ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಬಾರಿಯಾದರೂ ತಮ್ಮ ಜೀವನದಲ್ಲಿ, ಜೀವನವನ್ನು ನಿಭಾಯಿಸಲು ಫ್ಯಾಶನ್ ಬೇಕಾ ಎಂಬ ಪ್ರಶ್ನೆಯನ್ನು ಕೇಳಿಕೊಂಡಿರುತ್ತಾರೆ. ಏಕೆಂದರೆ, ಹಿಂದಿನ ಕಾಲದಲ್ಲಿ ಜನರು ಫ್ಯಾಶನ್ ಎಂಬ ಪದವನ್ನು ಕೇಳಿಯೇ ಇರಲಿಲ್ಲ. ಆದರೂ ಕೂಡ ಜೀವನ ಮಾಡುತ್ತಿರಲಿಲ್ವ!. ಆದರೆ, ಇಂದಿನ ಯುಗದ ಜನರ ಮೇಲೆ ಫ್ಯಾಷನ್ ಎಂಬ ಪದ ಏಕೆ ಅಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದೆ. ನಮಗೆ ಫ್ಯಾಶನ್ ಬೇಕಾ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿಯಲ್ಲಿ ಇರುತ್ತದೆ. ಏಕೆಂದರೆ, ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿContinue reading “ಜೀವನಕ್ಕೆ ಫ್ಯಾಶನ್ ಬೇಕಾ?”

ಓಲ್ಡ್ ಇಸ್ ಗೋಲ್ಡ್; ಎಂಬ ಮಾತು ಸತ್ಯ!

ಓಲ್ಡ್ ಇಸ್ ಗೋಲ್ಡ್ ಎಂಬ ಮಾತು ಏಕೆ ಬಂತು ಎಂದರೆ, ಯಾವತ್ತಿಗೂ ಕೂಡ ಹಳೆಯದು ನವನವೀನ. ಅದು, ಬಟ್ಟೆಯಲ್ಲಿ ಆಗಿರಬಹುದು ಮತ್ತು ಜೀವನಶೈಲಿಯಲ್ಲಿ ಆಗಿರಬಹುದು. ಮನುಷ್ಯ ಎಂಥಾ ಜೀವಿಯೆಂದರೆ, ಕಡಿಮೆ ಬುದ್ಧಿಶಕ್ತಿ ಹೊಂದಿರುವಂತಹ ಜೀವಿ. ಹೊಸತನ ಅಥವಾ ಯಾವುದಾದರೂ ಹೊಸದು ಬಂದರೆ ಹಳೆಯದನ್ನು ಬಹಳ ಜಲ್ದಿ ಮರೆಯುತ್ತಾನೆ. ಹೊಸದು ಬಂತು ಎಂದ ತಕ್ಷಣ ಅದನ್ನು ಅಳವಡಿಸಿಕೊಳ್ಳುವ ಆತುರ. ಆದರೆ ಹಳೆಯದು ಎಂದಿಗೂ ಮಾಸುವುದಿಲ್ಲ, ಇದು ಒಂದು ರೀತಿಯ ಮುಚ್ಚಿದ ಕೆಂಡ ದಲ್ಲಿ ಇರುವ ಬೆಂಕಿಯಾಗಿ, ಯಾವಾಗ ಬೇಕಾದರೂContinue reading “ಓಲ್ಡ್ ಇಸ್ ಗೋಲ್ಡ್; ಎಂಬ ಮಾತು ಸತ್ಯ!”

ಫ್ಯಾಶನ್ ಕ ಜಲ್ವ…

ಇಂದಿನ ಯುಗದಲ್ಲಿ ಫ್ಯಾಶನ್ ಎಂಬುವುದು ಒಂದು ಪದವಾಗಿ ಉಳಿದಿಲ್ಲ. ಫ್ಯಾಶನ್ ಎಂಬ ಪದವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ, ಅದು ಬಟ್ಟೆ, ಅಲಂಕಾರಿಕ ವಸ್ತು, ಹಾವಭಾವ ಮತ್ತು ತಮ್ಮ ಜೀವನ ಶೈಲಿಯಲ್ಲಿ ಆಗಿರಬಹುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ತನ್ನನ್ನು ಬೇರೆಯವರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ, ಎಲ್ಲರೂ ತಮ್ಮ ಜೀವನದಲ್ಲಿ ಫ್ಯಾಶನ್ ಅನ್ನು ಅಳವಡಿಸಿಕೊಂಡಿದ್ದಾರೆ. ಹಿಂದಿನ ಕಾಲದ (80s-90s) ಜನರು ಹೆಚ್ಚು ಫ್ಯಾಷನ್ ಕಡೆ ಗಮನ ಹರಿಸುತ್ತಿರಲಿಲ್ಲ. ಅಂದರೆ, ಥೂ ಫ್ಯಾಶನ್ ಹರಿವು ಇಲ್ಲವೆಂದಲ್ಲ… ತುಂಬಾContinue reading “ಫ್ಯಾಶನ್ ಕ ಜಲ್ವ…”

ಕರ್ನಾಟಕದ ಸಂಸ್ಕೃತಿಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ ಸಾಂಪ್ರದಾಯಿಕ ಉಡುಪುಗಳು…

ಭಾರತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕವು ದೇಶದ ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಗೋವಾ ಐದು ರಾಜ್ಯಗಳಿಂದ ಗಡಿಯಾಗಿದೆ, ರಾಜ್ಯವು ವೈವಿಧ್ಯಮಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಆಕರ್ಷಕ ಸೌಂದರ್ಯ ಮತ್ತು ಭವ್ಯ ವೈಭವದಿಂದ ಆಶೀರ್ವದಿಸಲ್ಪಟ್ಟಿರುವ ಕರ್ನಾಟಕ ರಾಜ್ಯವು ಭಾರತದಲ್ಲಿಯೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಕೂರ್ಗ್ ನ್ನು ಭಾರತದ ಸ್ಕಾಟ್ಲಂಡ್ ಮತ್ತು ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ.Continue reading “ಕರ್ನಾಟಕದ ಸಂಸ್ಕೃತಿಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ ಸಾಂಪ್ರದಾಯಿಕ ಉಡುಪುಗಳು…”

Design a site like this with WordPress.com
Get started