ಫ್ಯಾಶನ್ ಎಂಬ ಪದ ಬರೀ ಹುಡುಗಿಯರಿಗೆ ಮಾತ್ರ ಸೀಮಿತವಲ್ಲ, ಹುಡುಗರು ಕೂಡ ಮುಂದಿದ್ದಾರೆ. ಕೆಲವರ ಪ್ರಕಾರ ಫ್ಯಾಶನ್ ಬರೀ ಹುಡುಗಿಯರು ಮಾಡುತ್ತಾರೆ ಹೊರತು ಹುಡುಗರಿಗಲ್ಲ. ಇದರ ವಿರುದ್ಧವಾಗಿ ಇಂದಿನ ಯುಗದಲ್ಲಿ ಇಬ್ಬರೂ ಕೂಡ ಸರಿಸಮಾನವಾಗಿ ಫ್ಯಾಷನ್ ಮಾಡುತ್ತಿದ್ದಾರೆ. ಇದರ ವಿಷಯದಲ್ಲಂತೂ ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು. ಹುಡುಗರು ಫ್ಯಾಶನ್ ಎಂದು ಬಂದಾಗ ಅವರು ಪ್ರಮುಖವಾಗಿ ಉಡುಪಿನ ಮೇಲೆ ಗಮನ ಹರಿಸುತ್ತಾರೆ. ನಂತರದಲ್ಲಿ ಹೇರ್ ಸ್ಟೈಲ್, ಆಭರಣ, ವಾಚ್ ಮತ್ತು ಬ್ಯೂಟಿ ಪ್ರಾಡಕ್ಟ್ ಗಳ ಮೇಲೆ ಗಮನಹರಿಸಲು ಪ್ರಾರಂಭಿಸುತ್ತಾರೆ.

ಮೊದಲನೆಯದಾಗಿ ಬಂದಾಗ ಹುಡುಗರು ನೋಡುವುದು ಉಡುಪು.
ಉಡುಪು ಎಂದರೆ, ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ?
ವಿಭಿನ್ನವಾದ ಉಡುಪುಗಳನ್ನು ಧರಿಸಿ ಆಕರ್ಷಿತವಾಗಿ ಕಾಣಬೇಕು ಎಂಬ ಆಸೆ ಎಲ್ಲರಲ್ಲೂ ಇದೆ ಹುಡುಗರು ಕೂಡ ನಾನಾ ತರವಾದ ಉಡುಪುಗಳನ್ನು ಧರಿಸಿ ಆಕರ್ಷಿತವಾಗಿ ಕಾಣಬೇಕು ಎನ್ನುತ್ತಾರೆ.
ಫಾರ್ಮಲ್ಸ್
ಫಾರ್ಮಲ್ಸ್ ಎಂಬುವುದು ಹುಡುಗರಿಗೆ ಹೇಳಿ ಮಾಡಿಸಿದ ಉಡುಪು. ಏಕೆಂದರೆ, ಫಾರ್ಮಲ್ಸ್ ನಲ್ಲಿ ಹುಡುಗರು ತುಂಬಾ ಆಕರ್ಷಕವಾಗಿ ಮತ್ತು ಚೆನ್ನಾಗಿ ಕಾಣುತ್ತಾರೆ. ಹುಡುಗರು ಹೆಚ್ಚಾಗಿ ಅಫೀಷಿಯಲ್ ಜಾಗಕ್ಕೆ, ಮೀಟಿಂಗ್ ಗಳಿಗೆ ಹೋದಾಗ ಧರಿಸುತ್ತಾರೆ. ಫಾರ್ಮಲ್ಸ್ ಬಗ್ಗೆ ಎಲ್ಲರೂ ತಿಳಿದೇ ಇರುತ್ತಾರೆ. ಆದರೂ ಹೇಳುವುದು ನಮ್ಮ ಕರ್ತವ್ಯ ಹೇಳುತ್ತೇನೆ, ಫಾರ್ಮಲ್ಸ್ ಪ್ಯಾಂಟ್ ನ ಮೇಲೆ ಶರ್ಟನ್ನು ಇನ್ ಶರ್ಟ್ ಮಾಡಿ ಧರಿಸುತ್ತಾರೆ. ಲುಕ್ ಎಲ್ಲಾ ಹುಡುಗರ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಲುಕ್ ಕೊಂಚ ಕಡಿಮೆಯಾಗಿದ್ದರೂ ಸಹ ಪ್ರಚಲಿತದಲ್ಲಿದೆ. ಮೊದಲೇ ಹೇಳಿದ ಹಾಗೆ, ಫಾರ್ಮಲ್ಸ್ ಬಂದು ಇಂಟರ್ವ್ಯೂ, ಅಫಿಶಿಯಲ್ ಸ್ಥಳಗಳಲ್ಲಿ ಮತ್ತು ಕಾರ್ಪೊರೇಟ್ ಇನ್ಸ್ಪೆಕ್ಟರ್ ಗಳಲ್ಲಿ ಇಂದಿಗೂ ಕೂಡ ಅದರ ಪ್ರಸಿದ್ಧತೆಯನ್ನು ಕಳೆದುಕೊಂಡಿಲ್ಲ.
ಟಿ-ಶರ್ಟ್
ಒಂದು ಕಾಲದಲ್ಲಿ, ಟಿ-ಶರ್ಟ್ ಕೇವಲ ಒಳ ಉಡುಪು ಎಂದು ನಿಮಗೆ ತಿಳಿದಿದೆಯೇ?
1 ನೇ ವಿಶ್ವಯುದ್ಧದ ಸಮಯದಲ್ಲಿ, ಯುರೋಪಿಯನ್ ಸೈನಿಕರು ಮತ್ತು ನಂತರ ಅಮೇರಿಕನ್ ಸೈನಿಕರು ತಮ್ಮ ಸಮವಸ್ತ್ರದ ಅಡಿಯಲ್ಲಿ ಆರಾಮದಾಯಕವಾದ ಹಗುರವಾದ ಒಳ ಉಡುಪುಗಳಾಗಿ ಟಿ-ಶರ್ಟ್ಗಳನ್ನು ಧರಿಸುತ್ತಿದ್ದರು.
ನಂತರ ಹಾಲಿವುಡ್ ಚಲನಚಿತ್ರಗಳು ವಿನಮ್ರ ಟೀ ಶರ್ಟ್ ಅನ್ನು ಹೊರತಂದವು ಮತ್ತು ಅದನ್ನು ಟ್ರೆಂಡಿ ಔಟರ್ವೇರ್ ಎಂದು ಪ್ರಸಿದ್ಧಗೊಳಿಸಿದವು. “ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್” ಚಿತ್ರದಲ್ಲಿ ಮರ್ಲಾನ್ ಬ್ರಾಂಡೊ ಅವರ ಸಾಂಪ್ರದಾಯಿಕ ಬಿಳಿ ಟಿಶರ್ಟ್‌ನಲ್ಲಿ ಯೋಚಿಸಿ – ಸರಳವಾದ ಟಿ-ಶರ್ಟ್‌ನಲ್ಲಿ ತುಂಬಾ ಆಕರ್ಷಕವಾಗಿದೆ.
ಈಗ ಪ್ರತಿಯೊಬ್ಬರ ವಾರ್ಡ್‌ರೋಬ್‌ನಲ್ಲಿ ಟಿ-ಶರ್ಟ್ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ. ಮತ್ತು ಯಾವುದನ್ನು ಖರೀದಿಸಬೇಕು, ಯಾವುದನ್ನು ಧರಿಸಬೇಕು ಎಂಬ ಆಯ್ಕೆಗಳಿಗಾಗಿ ಸರಳವಾದ ಟಿ-ಶರ್ಟ್ ಗಳನ್ನು ಇಷ್ಟಪಡುತ್ತಾರೆ. ಇದು ಅನೇಕ ಮಾರ್ಪಾಡುಗಳು ಮತ್ತು ಅನೇಕ ಶೈಲಿಗಳಲ್ಲಿ ಬರುತ್ತದೆ. ಇದನ್ನು ಸ್ವತಂತ್ರ ಉಡುಪಿನಂತೆ ಅಥವಾ ನಿಮ್ಮ ಜಾಕೆಟ್ ಅಥವಾ ಜಂಪರ್ ಅಡಿಯಲ್ಲಿ ಧರಿಸಿ – ಇದು ನಿಮ್ಮ ವಾರ್ಡ್ರೋಬ್ನ ಅವಿಭಾಜ್ಯ ಅಂಗವಾಗಿದೆ.
ಟೀಶರ್ಟ್ ಎಂಬ ಪದವು ಭಾರತದಲ್ಲಿ 19ನೇ ಶತಮಾನದಿಂದ ಪ್ರಚಲಿತಕ್ಕೆ ಬಂದಿತು. ಹೊರದೇಶಗಳಲ್ಲಿ ತುಂಬಾ ಪ್ರಸಿದ್ಧ ತೆಯನ್ನು ಪಡೆದಿದ್ದರೂ ಕೂಡ ಭಾರತದಲ್ಲಿ ಪ್ರಸಿದ್ಧ ಪಡೆದುಕೊಳ್ಳಲು ಕೊಂಚ ಸಮಯ ಬೇಕಾಯಿತು. ಇದು ಬಂದು ಪಾಶ್ಚಾತ್ಯದ ಒಂದು ಶೈಲಿಯಾಗಿದೆ. ಟಿ-ಶರ್ಟ್ ಹೆಚ್ಚಾಗಿ ಯುವಜನತೆಯನ್ನು ಆಕರ್ಷಿಸಿದೆ. ಟಿ-ಶರ್ಟ್ ಹುಡುಗ ಮತ್ತು ಹುಡುಗಿಯರು ಧರಿಸುತ್ತಾರೆ. ಹುಡುಗರು ಸ್ವಲ್ಪ ಬೊಗಳೆ ಟಿ-ಶರ್ಟ್ ಧರಿಸಿದರೆ, ಹುಡುಗಿಯರು ಬಾಡಿ ಫಿಟಿಂಗ್ ಟಿ-ಶರ್ಟನ್ನು ಧರಿಸಲು ಇಚ್ಛಿಸುತ್ತಾರೆ.
ಟಿ-ಶರ್ಟ್ ಗಳಲ್ಲೂ ಕೂಡ ವಿಭಿನ್ನವಾದ ಟಿ-ಶರ್ಟ್ ಗಳಿವೆ. ಅದರಲ್ಲಿ ಪ್ರಮುಖವಾದುದ್ದು.
1. ಮೂಲಭೂತ ಅರ್ಧ ತೋಳಿನ ಟಿ ಶರ್ಟ್
2. ಲಾಂಗ್ ಸ್ಲೀವ್ ಕ್ರೂ ನೆಕ್ ಟಿ-ಶರ್ಟ್‌ಗಳು
3. ಪೊಲೊ ಕಾಲರ್ ಟಿ ಶರ್ಟ್
4. ವಿ-ಕುತ್ತಿಗೆ ಟಿ ಶರ್ಟ್
ಮುಂತಾದವು
1. ಮೂಲಭೂತ ಅರ್ಧ ತೋಳಿನ ಟಿ ಶರ್ಟ್
ಟಿ-ಶರ್ಟ್‌ನಲ್ಲಿ ಅತ್ಯಂತ ಸರಳವಾದ ಶೈಲಿ, ಇದು ಕುತ್ತಿಗೆಯ ಸಿಬ್ಬಂದಿ ಕಂಠರೇಖೆಯನ್ನು ಹೊಂದಿದೆ. ಇದು ಟಿ-ಶರ್ಟ್‌ನ ಅತ್ಯಂತ ಜನಪ್ರಿಯ ವಿಧವಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರು ಇಬ್ಬರೂ ಇಷ್ಟಪಡುತ್ತಾರೆ. ಕುತ್ತಿಗೆಯ ತಳದಲ್ಲಿ ಇರುವ ಸಿಬ್ಬಂದಿ ಕಂಠರೇಖೆಯು ಹೆಚ್ಚಿನ ಜನರಿಗೆ ಸರಿಹೊಂದುತ್ತದೆ.

2. ಲಾಂಗ್ ಸ್ಲೀವ್ ಕ್ರೂ ನೆಕ್ ಟಿ-ಶರ್ಟ್‌ಗಳು
ಹಿಂದಿನ ಟೀ ಶರ್ಟ್‌ನಂತೆಯೇ ಆದರೆ ಉದ್ದವಾದ ತೋಳುಗಳೊಂದಿಗೆ.

3. ಪೊಲೊ ಕಾಲರ್ ಟಿ ಶಾರ್ಟ್
ಈ ಟಿ-ಶರ್ಟ್ ಸರಳವಾದ ಪೋಲೋ ಕಾಲರ್ ಅನ್ನು ಹೊಂದಿದೆ.

4. ವಿ ಕುತ್ತಿಗೆ ಟಿ-ಶರ್ಟ್
ಈ ರೀತಿಯ ವಿ-ನೆಕ್ಡ್ ಟೀ ಶರ್ಟ್‌ಗಳನ್ನು ಫುಟ್‌ಬಾಲ್ ಜರ್ಸಿ ಎಂದೂ ಕರೆಯುತ್ತಾರೆ.

ಶರ್ಟ್ ಮತ್ತು ಟಿ-ಶರ್ಟ್ ಮಿಶ್ರಿತ ಉಡುಪು
ಶರ್ಟ್ ಮತ್ತು ಟಿ-ಶರ್ಟ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಇದೇನಪ್ಪಾ ಶರ್ಟ್ ಮತ್ತು ಟಿ-ಶರ್ಟ್ ಮಿಶ್ರಿತ ಉಡುಪು ಎಂದು ಕೇಳಬಹುದು. ಇದರಲ್ಲಿ ಶರ್ಟ್ ಮತ್ತು ಟಿ ಶರ್ಟ್ ಗಳು ಎರಡು ಕಾಣಬಹುದು. ಈ ಲುಕು ಬಂದು ಟೀ ಶರ್ಟ್ ನ ರೀತಿಯಲ್ಲಿ ಇರುತ್ತದೆ ಆದರೆ ಸೈಡಿನಲ್ಲಿ ಬಟನ್ ಗಳು ಬಂದಾಗ ಶರ್ಟ್ ಲುಕ್ ಕೊಡುತ್ತದೆ. ಇದನ್ನು ಶರ್ಟ್ ಮತ್ತು ಟಿ-ಶರ್ಟ್ ಮಿಶ್ರಿತ ಉಡುಪು ಎನ್ನಬಹುದು.

ಶರ್ಟ್ ಗಳಲ್ಲಿ ರಂಗ್ಬಿರಂಗಿ
ಇವರು ಯಾಕೆ ಶರ್ಟ್ ಗಳಲ್ಲಿ ರಂಗ್ಬಿರಂಗಿ ಎಂದು ಹೇಳುತ್ತಿದ್ದಾರೆ ಎಂದು ಯೋಚಿಸಬಹುದು. ಇದರಲ್ಲಿ ಒಂದು ಶರ್ಟ್ ನಲ್ಲಿ ಎರಡು ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಒಂದು ಭಾಗದಲ್ಲಿ ಒಂದು ಕಲರ್ ಆದರೆ ಇನ್ನೊಂದು ಭಾಗದಲ್ಲಿ ಇನ್ನೊಂದು ಕಲರ್ ಇರುತ್ತದೆ. ಇದು ಇದರ ವಿಶೇಷತೆ.

ಸೂಟ್ ಗಳು
ಸೂಟ್ ಎಂದ ತಕ್ಷಣ ನಮಗೆ ನೆನಪಾಗುವುದು ಹುಡುಗರು. ಹುಡುಗರೇ ಹೆಚ್ಚಾಗಿ ಸೂಟನ್ನು ಧರಿಸುವುದು. ಸೂಟ್ ಬಂದು ನಮ್ಮ ಭಾರತದಲ್ಲಿ ಮದುವೆ ವಿಶೇಷ ಕಾರ್ಯಕ್ರಮ ಮತ್ತು ಕಾರ್ಪೊರೇಟರ್ ಸೆಕ್ಟರ್ ಗಳಲ್ಲಿ ಧರಿಸುವುದು ಹೆಚ್ಚು. ಇನ್ನು ಸೂಟ್ ಕಡೆ ಗಮನ ಕೊಟ್ಟರೆ, ಇದರಲ್ಲಿ ಬಂದು ಫಾರ್ಮಲ್ಸ್ ಪ್ಯಾಂಟ್, ಫಾರ್ಮಲ್ ಶರ್ಟ್, ಬ್ಲೇಸರ್ (ಕೆಲವೊಂದು ಸಲ ಬಳಸುತ್ತಾರೆ) ಮತ್ತು ಕೋರ್ಟ್ ಇರುತ್ತದೆ.
ಸೂಟ್ ಗಳಲ್ಲಿ ಕೆಲವೊಂದು ಬಾರಿ ನೋಡಿದಾಗ ವಾಸ್ ಕೋಟನ್ನು ಕೂಡ ಬಳಸುತ್ತಾರೆ. ನಾನು ನೋಡಿದ ಪ್ರಕಾರ ವಾಸ್ ಕೋಟ್ ಹೆಚ್ಚಾಗಿ ರಾಜಕಾರಣಿಗಳು ಬಳಸುತ್ತಾರೆ ಅದರಲ್ಲಿಯೂ ಹೆಣ್ಣುಮಕ್ಕಳು ಕುಡಿದ ಮತ್ತು ಸೀರೆಯ ಮೇಲೆಯೂ ಕೂಡ ಬಳಸುವುದುಂಟು.

ಹೇರ್ ಸ್ಟೈಲ್
ಹೇರ್ ಸ್ಟೈಲ್ ಎಂಬ ವಿಷಯಕ್ಕೆ ಬಂದರೆ, ಹುಡುಗರು ಉಡುಪಿನ ನಂತರ ಹೆಚ್ಚು ಮಹತ್ವ ನೀಡುವುದು ತಮ್ಮ ಕೂದಲಿನ ಬಗ್ಗೆ. ತಮ್ಮ ಕೂದಲಿಗೆ ಭಿನ್ನ-ಭಿನ್ನವಾದ ಆಕಾರಗಳನ್ನು ನೀಡುವುದರ ಮೂಲಕ ಆಕರ್ಷಿತವಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ, ಪ್ರಮುಖವಾದುದ್ದು ಎಂದರೆ.

A. ಬ್ಯಾಕ್ ಆನ್ ದಿ ಬ್ಲಾಕ್ (Back on the Block)
B. ಬ್ರವ್ (BRUV)
C. ಸ್ಕೈ ಹೈ (Sky High)
D. ಗುಡ್ ಫೆಲ್ಲಾಸ್ (Good Fellas)
E. ಕ್ರಿವ್ ಲವ್ (Crew Love)
ಮುಂತಾದವು
A. ಬ್ಯಾಕ್ ಆನ್ ದಿ ಬ್ಲಾಕ್ (Back on the Block)
ಈ ಹೇರ್ ಸ್ಟೈಲಿನಲ್ಲಿ ಬಂದು ಕೂದಲಿನ ಮಧ್ಯಭಾಗದಲ್ಲಿ ಕರ್ಲಿ(ಗುಂಗುರು) ಮಾಡಿ, ಎಡ ಮತ್ತು ಬಲ ಭಾಗದಲ್ಲಿ ಕೊಂಚ ಟ್ರಿಮ್ ಮಾಡಿಸಿ ಹಾಗೂ ಅದರ ಕೆಳಗಿನ ಭಾಗದಲ್ಲಿ ಸಂಪೂರ್ಣವಾಗಿ ಕೂದಲನ್ನು ರಿಮೂವ್ ಮಾಡಿಸುತ್ತಾರೆ.
B. ಬ್ರವ್ (BRUV)
ಇದರಲ್ಲಿ ಬಂದು ಕೂದಲಿನ ಮಧ್ಯಭಾಗದ ಕೂದಲನ್ನು ಎರಡರಿಂದ ಮೂರು ಇಂಚಿನ ವರೆಗೂ ಇರಿಸಿ ಮಿಕ್ಕಿದ್ದನ್ನು ತೆಗೆಸಿ ಬಿಡುತ್ತಾರೆ ಆದಂಗೆ ವಾದಿಸುತ್ತಾರೆ. ಇನ್ನು ಎಡ ಮತ್ತು ಬಲ ಬದಿಯಲ್ಲಿ ಕೂದಲನ್ನು ಟ್ರಿಮ್ ಮಾಡಲಾಗುತ್ತದೆ. ಈ ಹೇರ್ ಸ್ಟೈಲ್ ನ ವಿಶೇಷತೆಯಾಗಿದೆ.
C. ಸ್ಕೈ ಹೈ (Sky High)
ಈ ಹೇ ಸ್ಟೈಲಿನಲ್ಲಿ ಬಂದು ಎಡ ಮತ್ತು ಬಲ ಬದಿಯ ಭಾಗದ ಮೂರರಿಂದ ನಾಲ್ಕು ಇಂಚಿನ ತನಕ ಕೂದಲನ್ನು ಸಂಪೂರ್ಣವಾಗಿ ತೆಗೆಯುತ್ತಾರೆ. ಇನ್ನೂ ಅದರ ಮೇಲಿನ ಭಾಗವನ್ನು ಕೊಂಚ ಟ್ರಿಮ್ ಮಾಡಿಸಿ ಮುಂದೆ ಬಂದರೆ ಮೇಲಿನ ಅಥವಾ ಮಧ್ಯಭಾಗದ ಕೂದಲನ್ನು ಆಕಾಶದ ಕಡೆ ಮೇಲ್ಮುಖ ಮಾಡುವಂತೆ ಸ್ಟ್ರೈಟ್ನಿಂಗ್ ಮಾಡಿ ನಿಲ್ಲಿಸುತ್ತಾರೆ. ಆದ್ದರಿಂದ, ಈ ಸ್ಟೈಲಿಗೆ ಹೆಸರನ್ನು ನೀಡಲಾಗಿದೆ.
D. ಗುಡ್ ಫೆಲ್ಲಾಸ್ (Good Fellas)
ಗುಡ್ ಫೆಲ್ಲಾಸ್ ಹೇರ್ ಸ್ಟೈಲ್ ಬಹಳ ಸಿಂಪಲ್(ಸರಳ) ಹಾಗೂ ಆಕರ್ಷಿತವಾಗಿದೆ. ಇದರಲ್ಲಿ ಬಂದು ಎಡ ಮತ್ತು ಬಲ ಬದಿಯ ಕೆಳಗಿನ 2 ಇಂಚಿನ ತನಕ ಟ್ರಿಮ್ ಮಾಡಿಸುತ್ತಾರೆ. ಮಿಕ್ಕಿದ ಕೂದಲನ್ನು ಹಿಂಬದಿಗೆ ಆಗುವಂತೆ ಮಾಡುತ್ತಾರೆ.
E. ಕ್ರಿವ್ ಲವ್ (Crew Love)
ಈ ಹೇರ್ ಸ್ಟೈಲಿನಲ್ಲಿ ಮೊದಲೇ ಲವ್ ಇದೆ ಇನ್ನೇನು ಹೇಳುವುದು. ಈ ಹೇರ್ ಸ್ಟೈಲ್ ಹೆಸರಿನಂತೆಯೇ ಬಹಳ ಆಕರ್ಷಕವಾಗಿದೆ. ಮುಂದೆ ಹೇಳಲು ಪದಗಳ ತಿಳಿಯುತ್ತಿಲ್ಲ.
ಆಭರಣಗಳು
ಆಭರಣ ಎಂದ ತಕ್ಷಣ ಎಲ್ಲರ ತಲೆಗೂ ಬರುವುದು ಹೆಣ್ಣುಮಕ್ಕಳು. ಆದರೆ, ಹುಡುಗರು ಕೂಡ ಆಭರಣ ಪ್ರಿಯರೇ. ಅವರು ಕೂಡ ಆಭರಣಗಳನ್ನು ಧರಿಸುತ್ತಾರೆ. ಆದರೆ, ಹುಡುಗಿಯರಿಗೆ ಇರುವಷ್ಟು ಕಲೆಕ್ಷನ್ ಅವರಿಗಿಲ್ಲ ಎಂಬುವುದೇ ಬೇಸರ.
ಇನ್ನು ಹುಡುಗರ ಆಭರಣಕ್ಕೆ ಬಂದರೆ, ಪ್ರಮುಖವಾಗಿ
I. ಚೇನ್
II. ಬ್ರೇಸ್ಲೆಟ್
III. ರಿಂಗ್ (ಉಂಗುರ)
IV. ಕಿವಿ ಓಲೆ
ಮುಂತಾದವು
I. ಚೇನ್
ಚೇನ್ ಎಂದರೆ ಎಲ್ಲರ ಪರಿಕಲ್ಪನೆಗೆ ಮೊದಲು ಬರುವುದೇ ಕುತ್ತಿಗೆಯ ಚೇನ್. ಇದು ಬಂದು ಚಿನ್ನ, ಬೆಳ್ಳಿ ಮತ್ತು ಆರ್ಟಿಫಿಶಿಯಲ್ ಗಳಲ್ಲಿ ಸಿಗುತ್ತದೆ. ಬಹಳಷ್ಟು ಹುಡುಗರು ಚಿನ್ನ ಮತ್ತು ಬೆಳ್ಳಿಯ ಚೇನ್ ಅನ್ನು ಧರಿಸಲು ಇಷ್ಟಪಡುತ್ತಾರೆ. ಚೇನ್ ಗಳಲ್ಲೂ ಕೂಡ ಬಹಳಷ್ಟು ವಿಧಗಳಿವೆ.
ಅದರಲ್ಲಿ ಪ್ರಮುಖವಾದದ್ದು
*ಲಾಂಗ್ ಚೇನ್
*ಶಾರ್ಟ್ ಚೇನ್
ಮುಂತಾದ

II. ಬ್ರೇಸ್ಲೆಟ್
ಬ್ರೇಸ್ಲೆಟ್ ಬಂದು ಟ್ರೆಂಡಿಂಗ್ ನಲ್ಲಿ ಇರುವಂತಹ ಒಂದು ಆಭರಣ. ಬ್ರೇಸ್ಲೆಟ್ ಅನ್ನು ಹುಡುಗಿಯರು ಬಳಸುವುದಿಲ್ಲ ಎಂದಲ್ಲ, ಆದರೆ ಹುಡುಗರು ಹೆಚ್ಚಾಗಿ ಬಳಸುತ್ತಾರೆ. ಬ್ರೇಸ್ಲೆಟ್ ಗಳಲ್ಲಿ ತುಂಬಾ ವೆರೈಟಿಗಳಿವೆ. ಚೇನಿನ ಮಧ್ಯಭಾಗದಲ್ಲಿ ಡಿಸೈನ್ ಗಳು(ಉದಾ: ಆನೆ, ಒಂಟೆ ಮುಂತಾದವು), ಅರಳು ಮತ್ತು ದೇವರ ಮೂರ್ತಿಗಳು ಬರುತ್ತದೆ. ಬ್ರೇಸ್ಲೆಟ್ ನಲ್ಲಿ ಚಿನ್ನ, ಬೆಳ್ಳಿ, ಪಂಚಲೋಹ ಗಳಿಂದ ಮಾಡಿರುವಂತಹ ಮತ್ತು ಆರ್ಟಿಫಿಶಿಯಲ್ ಮುಂತಾದುವುಗಳಿಂದ ಮಾಡಲಾಗುತ್ತದೆ.

III. ರಿಂಗ್
ರಿಂಗ್ ಬಂದು ಚಿನ್ನ, ಬೆಳ್ಳಿ ಮತ್ತು ಆರ್ಟಿಫಿಶಿಯಲ್ ನಲ್ಲಿ ಇರುತ್ತದೆ. ರಿಂಗ್ನ ಮಧ್ಯಭಾಗದಲ್ಲಿ ಹರಳು ಮತ್ತು ಮುಂತಾದುವು ದರಿಂದ ಡಿಸೈನ್ ಮಾಡಿರಲಾಗುತ್ತದೆ. ಹುಡುಗರು ರಿಂಗ್ ಆನ್ನು ಒಂದು ಅಥವಾ ಎರಡು ಬೆರಳುಗಳಲ್ಲಿ ಧರಿಸುವುದನ್ನು ಸಾಮಾನ್ಯವಾಗಿ ನೋಡಿರಬಹುದು. ಆದರೆ ಕೆಲವರು ತಮ್ಮ ಎರಡು ಹಸ್ತದ ಹತ್ತು ಬೆರಳುಗಳಲ್ಲಿ ಧರಿಸುತ್ತಾರೆ!

IV. ಕಿವಿ ಓಲೆ
ಕಿವಿ ಓಲೆಯನ್ನು ಹುಡುಗರು ಕೂಡ ಧರಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಕೂಡ ಕಿವಿಯೋಲೆಯನ್ನು ಹಾಕಿದ್ದರು, ಅವರು ಒಂದು ವಯಸ್ಸಿಗೆ ಬಂದ ನಂತರ ಕೆಲವರಿಗೆ ಇಷ್ಟವಾಗುತ್ತದೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೂ, ಇಂದಿಗೂ ಕೂಡ ಬೇಡಿಕೆಯಲ್ಲಿರುವ ಅಂತಹ ಆಭರಣ.

ವಾಚ್
ವಾಚ್ ಎಂದ ತಕ್ಷಣ ನೆನಪಾಗುವುದು, ಸಮಯಪ್ರಜ್ಞೆ. ಹಿಂದಿನ ಕಾಲದವರು ಒಂದು ಮಾತುನ್ನು ಹೇಳುತ್ತಿದ್ದರು. ಅದು ಏನೆಂದರೆ, ಯಾರು ವಾಚನ ದರಿಸುತ್ತಾರೆ ಅವರಿಗೆ ಹೆಚ್ಚಿನ ಸಮಯ ಪ್ರಜ್ಞೆ ಇರುತ್ತದೆ ಎಂದು. ಇಂದು ಇಂದಿನ ಕಾಲಕ್ಕೆ ಬಂದರೆ ವಾಚ್ ಗಳಲ್ಲಿ ಬಹಳಷ್ಟು ವಿಧಗಳಿವೆ.
ಅದರಲ್ಲಿ ಪ್ರಮುಖವಾದದ್ದು
i. ವ್ರಿಸ್ಟ್ ವಾಚ್
ii. ಸ್ಮಾರ್ಟ್ ವಾಚ್
ಮತ್ತು
iii. ವಿಟ್ನೆಸ್ ಬ್ಯಾಂಡ್
ಮುಂತಾದವು
i. ವ್ರಿಸ್ಟ್ ವಾಚ್
ವ್ರಿಸ್ಟ್ ವಾಚ್ ನ ಪ್ರಸಿದ್ಧತೆ ಇಂದಿಗೂ ಕೂಡ ಕಡಿಮೆಯಾಗಿಲ್ಲ. ಇದರ ಮಾರ್ಕೆಟಿಂಗ್ ಮುಂಚೆ ಹೇಗಿತ್ತು ಇಂದಿಗೂ ಕೂಡ ಆಗಿದೆ. ಮೊದಲು ಬಂದಿತ್ತು ವ್ರಿಸ್ಟ್ ವಾಚ್ ನಂತರ ಬೇರೆಲ್ಲ ವಾಚ್ ಗಳು ಬಂದವು. ವ್ರಿಸ್ಟ್ ವಾಚ್ ಅನ್ನು ಧರಿಸಿದ್ದರೆ ಅದಕ್ಕೆ ಆದಂತಹ ಒಂದು ಘನತೆ. ಕಾರ್ಪೊರೇಟರ್ ಸೆಕ್ಟರ್ ಗಳಲ್ಲಿ ಇಂದಿಗೂ ಕೂಡ ವ್ರಿಸ್ಟ್ ವಾಚ್ ನ ಮಹತ್ವ ಅಜರಾಮರ.

ii. ಸ್ಮಾರ್ಟ್ ವಾಚ್
ಸ್ಮಾರ್ಟ್ ವಾಚ್ ಈಗಿನ ದಿನಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಲ್ಲಿ ಕ್ಯಾಲಿಕೇಶನ್ ಮಾಡಬಹುದು, ಡಿಜಿಟಲ್ ಟೈಮ್ ನೋಡಬಹುದು, ಟ್ರಾನ್ಸ್ಲೇಷನ್ ಮಾಡಬಹುದು, ಆಟಗಳನ್ನು ಆಡಬಹುದು ಮತ್ತು ಫೋನ್ ಕೂಡ ಮಾಡಬಹುದು. ಮೊಬೈಲ್ನಲ್ಲಿ ಬಳಸಬಹುದಾದ ಅಪ್ಲಿಕೇಶನ್ಗಳು ಸ್ಮಾರ್ಟ್ ವಾಚ್ ನಲ್ಲಿ ಬಳಸಬಹುದಾಗಿದೆ. ವೈಫೈ ಅಥವಾ ಬ್ಲೂಟೂತ್ ಕನೆಕ್ಟ್ ಮಾಡಬಹುದು, ಗೂಗಲ್ ಮ್ಯಾಪ್ ಬಳಸಬಹುದು. ಆರೋಗ್ಯದ ಆಪ್ ಕೂಡ ಬಳಸಬಹುದು. ಇದರಲ್ಲಿ ಇನ್ನೊಂದು ಉಪಯುಕ್ತಕಾರಿ ವಿಷಯವೇನೆಂದರೆ ನಮ್ಮ ಹೃದಯದ ಬಡಿತವನ್ನು ನಿಮಿಷಕ್ಕೆ ಎಷ್ಟು ನಡೆಯುತ್ತಿದೆ ಎಂದು ತೋರಿಸುತ್ತದೆ. 1972 ರಲ್ಲಿ ಡಿಜಿಟಲ್ ವಾಚ್ ಬಿಡುಗಡೆಯಾಯಿತು.

iii. ಫಿಟ್ನೆಸ್ ಬ್ಯಾಂಡ್
ಫಿಟ್ನೆಸ್ ಬ್ಯಾಂಕ್ ಈಗಿನ ಕಾಲದ ಯುವಕ ಮತ್ತು ಯುವತಿಯರು ಹೆಚ್ಚಾಗಿ ಬಳಸುತ್ತಿರುವ ಅಂತಹ ಬ್ಯಾಂಡ್ ಆಗಿದೆ. ಇದನ್ನು ಬೆಳಗ್ಗೆ ಜಾಗಿಂಗ್ ಮಾಡುವಾಗ, ವಾಕಿಂಗ್ ಹೋದಾಗ ಬಳಸುತ್ತಾರೆ. ಇದರಲ್ಲಿ ನಾವು ಎಷ್ಟು ದೂರ ನಡೆಯುತ್ತೇವೆ, ನಮ್ಮ ಹೃದಯದ ಬಡಿತ ಎಷ್ಟು ಇದೆ, ನಮ್ಮಲ್ಲಿ ಎಷ್ಟು ಕ್ಯಾಲರಿ ಇದೆ, ನಮ್ಮ ಬಿಪಿ ಎಷ್ಟಿದೆ ಎಂದು ತೋರಿಸುತ್ತದೆ. ಇದು ಫಿಟ್ನೆಸ್ ಬ್ಯಾಂಡ್.

ಬ್ಯೂಟಿ ಪ್ರಾಡಕ್ಟ್
ಬ್ಯೂಟಿ ಪ್ರಾಡಕ್ಟ್ ಗಳನ್ನು ಹೆಣ್ಣು ಮಕ್ಕಳಲ್ಲದೆ ಗಂಡು ಮಕ್ಕಳು ಕೂಡ ಬಳಸುತ್ತಾರೆ. ಅವರು ಕೂಡ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪುರುಷರಿಗೂ ಕೂಡ ಬ್ಯೂಟಿ ಪ್ರಾಡಕ್ಟ್ ಗಳು ಬಂದಿವೆ. ಅದರಲ್ಲಿ ಪ್ರಮುಖವಾದದ್ದು
1) ಫೇರ್ ನೆಸ್ ಕ್ರೀಮ್
2) ಫೇಸ್ ಪ್ಯಾಕ್
3) ಸನ್ಸ್ ಕ್ರೀಮ್
ಮುಂತಾದವು
ಫೇರ್ ನೆಸ್ ಕ್ರೀಮ್
ಫೇರ್ ನೆಸ್ ಕ್ರೀಮ್ ಅನ್ನು ಹುಡುಗಿಯರು ಅಲ್ಲದೆ ಹುಡುಗರು ಕೂಡ ಬಳಸುತ್ತಾರೆ. ಇದನ್ನು ಹಚ್ಚುವುದರಿಂದ ತಮ್ಮ ಮುಖದ ಕಾಂತಿ ಹೆಚ್ಚಾಗಿ ತಮ್ಮತ್ತ ಎಲ್ಲರೂ ಆಕರ್ಷಿತರಾಗುತ್ತಾರೆ ಎಂದು.
ಇನ್ನೂ ಹೆಚ್ಚು ಬ್ಯೂಟಿ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಬಂದಿದೆ.

ಇದಷ್ಟೇ ಅಲ್ಲದೆ ಹುಡುಗರು ಇನ್ನಷ್ಟು ಫ್ಯಾಶನ್ ಮಾಡುತ್ತಾರೆ. ತಾವು ಕೊಡುವಂತ ಪಾದರಕ್ಷೆಗಳಿಂದ ಹಿಡಿದು ಬ್ಯೂಟಿ ಪ್ರಾಡಕ್ಟ್ ಗಳವರೆಗೂ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಪ್ರಾಡಕ್ಟ್ ಗಳು ಬಂದಿವೆ ಹಾಗೂ ಇಂದಿನ ಯುವಕರು ಹೆಚ್ಚಾಗಿ ಬಳಸುತ್ತಿದ್ದಾರೆ. ಫ್ಯಾಶನ್ ಎಂಬುದು ಯಾರಿಗೂ ಸೀಮಿತವಲ್ಲ ಅದನ್ನು ಯಾರು ಬೇಕಾದರೂ ಮಾಡಬಹುದು. ಅದು ಅವರವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು ಅದನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಹಾಗೂ ಮಾಡಲುಬಾರದು.
Beauty is a life
Nothing but anything…
That’s your choice what do you think...ಸಂಗ್ರಹಣೆ
ಛಾಯಾಚಿತ್ರ(ಫೋಟೋಸ್)
1) ಗೂಗಲ್
ಸಂಗ್ರಹಣೆ
ಛಾಯಾಚಿತ್ರ(ಫೋಟೋಸ್)
1) ಗೂಗಲ್
























