ಪರ್ಫ್ಯೂಮ್ (ಸುಗಂಧ ದ್ರವ್ಯ)

ಈಗಿನ ಕಾಲದಲ್ಲಿ ಎಲ್ಲರೂ ಕೂಡ ಪರ್ಫ್ಯೂಮ್ ಅನ್ನೂ ಬಳಸುತ್ತಾಳೆ, ಇದು ಹೆಚ್ಚು ಉತ್ಸುಕರಾಗಿರಲು ಸಹಾಯ ಮಾಡುತ್ತದೆ. ಇದು ಎಲ್ಲರಿಗೂ ಪ್ರಿಯವಾದ ವಸ್ತುವಾಗಿದ್ದು ಇದನ್ನು ಮೊಟ್ಟಮೊದಲ ಬಾರಿಗೆ ಮೆಸಪಟೋಮಿಯಾದ 4000 ವರ್ಷಗಳ ಹಿಂದೆ ತಯಾರಿಸಲಾಗಿತ್ತು.ಇದನ್ನು ಪ್ರಾರ್ಥನೆ, ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲು ಬಳಸುತ್ತಿದ್ದರು. ಇದನ್ನು ಮೊದಲ ಬಾರಿಗೆ ಶುರು ಮೂಡಿದ್ದು ಮೆಸೋಪೋಟೋಮಿಯ, ಈಜಿಪ್ಟ್, ಸಿಂಧೂ ನಾಗರಿಕತೆ ಹಾಗೂ ಪ್ರಾಚೀನ ಕಾಲದ ಚೀನಾ.
ಸಿಂಧೂ ನಾಗರಿಕತೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದರು (3300BC-1300BC). ಮೆಸೋಪೋಟಮಿಯ ದಲ್ಲಿ ಬಳಸಲಾಗುತ್ತಿದ್ದ 4000 ವರ್ಷಗಳ ಹಳೆಯ ಪರ್ಫ್ಯೂಮ್ ಪೈರ್ಗೊಸ್, ಸೈರ್ಪಸ್(Pyrgos, Cyprus).

ಏಕೆ ಪರ್ಫ್ಯೂಮ್ ಎಂದರೆ ಅಷ್ಟು ಇಷ್ಟ?

ಏಕೆಂದರೆ ಅದರ ಸುಗಂಧದಿಂದ. ಕೆಲವರಿಗೆ ಪರ್ಫ್ಯೂಮ್ ಎಂದರೆ ಅಷ್ಟಕಷ್ಟೇ, ಆದರೆ ಹೆಚ್ಚು ಜನ ಪರ್ಫ್ಯೂಮ್ ಅನ್ನು ಬಳಸುತ್ತಾರೆ. ಜನರನ್ನು ತನ್ನ ಕಡೆಗೆ ಹೊಲಿಸಿಕೊಳ್ಳಲು ಇದು ಒಂದು ಮಾರ್ಗ.
ಮನೋವಿಜ್ಞಾನದ ಪ್ರಕಾರ; ಗಂಡು ಮಕ್ಕಳು ಹೇಗೆ ಇದ್ದರೂ, ಅವರು ಒಳ್ಳೆಯ ಪರಿಮಳ ಬೀರುವ ಪರ್ಫ್ಯೂಮ್ ಅನ್ನು ಹಾಕಿಕೊಂಡು ಹೋದರೆ ಹೆಣ್ಣುಮಕ್ಕಳನ್ನು ಹೆಚ್ಚಾಗಿ ಅಟ್ರಾಕ್ಟ್ ಮಾಡುತ್ತಾರಂತೆ.
ಆದ್ದರಿಂದ ನನ್ನ ಮೊದಲಿನ ಬ್ಲಾಗಿನಲ್ಲೂ ಕೂಡ ಇದನ್ನೇ ಹೇಳಿದೆ;

My perfume is,
My attitude

ಮನುಷ್ಯರು ಹೆಚ್ಚಾಗಿ ಬೆವರುತ್ತಾರೆ, ಆ ಬೆವರಿಂದ ಬರುವ ದುರ್ವಾಸನೆಯನ್ನು ತಡೆಯಲು ಪರ್ಫ್ಯೂಮ್ ಅನ್ನು ಹಾಕಿಕೊಳ್ಳುತ್ತಾರೆ. ಕೆಲವರಿಗೆ ಕೆಲವೊಂದು ಪರ್ಫ್ಯೂಮೆ ಫ್ಲೇವರ್ ಇಷ್ಟವಾಗುತ್ತದೆ, ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಅವರು ಯಾವ ಪರ್ಫ್ಯೂಮ್ ಅನ್ನು ಬಳಸುತ್ತಾರೆ ಅದು ಅವರಿಗೆ ಬಿಟ್ಟದ್ದು.
ಫ್ರಾನ್ಸ್ ನ ಪರ್ಫ್ಯೂಮ್ ಎಂದರೆ ಎಲ್ಲರಿಗೂ ಬಹಳ ಇಷ್ಟ. ಪರ್ಫ್ಯೂಮ್ ಅನ್ನೂ ನಮ್ಮ ದೇಶದಲ್ಲೂ ಕೂಡ ಸಿಂಧೂ ನಾಗರಿಕತೆ ಯಿಂದಲೂ ಬಳಸುತ್ತಿದ್ದಾರೆ. ಇದನ್ನು ಆಯುರ್ವೇದದ ಚರಕ ಹಾಗೂ ಸುಶ್ರತ ಸಮ್ಮಿತ ತಯಾರು ಮಾಡುತ್ತಿದ್ದರು. ಪ್ರಪಂಚದಲ್ಲಿ ಪ್ರಪ್ರಥಮ ಬಾರಿಗೆ ಕೆಮಿಸ್ಟ್ ಆಗಿದ್ದ ಒಬ್ಬ ಮಹಿಳೆ ಅವರ ಹೆಸರು ತಪೂತಿ ಇವರು 1200 ವರ್ಷಗಳ ಹಿಂದೆ ತಯಾರು ಮಾಡುತ್ತಿದ್ದರು. ಇವರು ಮೆಸೊಪೋಟೊಮಿಯಾ ಸರ್ಕಾರ ಹಾಗೂ ಸಂಪ್ರದಾಯದಲ್ಲಿ ಸ್ಥಾನ ಶಕ್ತಿಶಾಲಿಯಾಗಿತ್ತು.
ಇಸ್ಲಾಮಿಕ್ ಸಂಪ್ರದಾಯದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದರು ಹಾಗೂ ಬಳಸುತ್ತಿದ್ದಾರೆ. ಇಸ್ಲಾಮಿಕ್ ಧರ್ಮದವರು ಇದನ್ನು 6ನೇ ಶತಮಾನದಲ್ಲಿ ಬಳಸಲಾರಂಭಿಸಿದರು ಮತ್ತು ಅವರ ಪೂಜಾ, ಪ್ರಾರ್ಥನೆಯಲ್ಲಿ ಇದರ ಸ್ಥಾನ ಅಪಾರ. ಒಬ್ಬ ಅರಬಿಕ್ ತತ್ವಜ್ಞಾನಿ ಅಲ್-ಕಿನ್ ಡಿ(801-873) ಇವರು ಒಂದು ಪುಸ್ತಕವನ್ನು ಬರೆಯುತ್ತಾರೆ. ಅದರ ಹೆಸರು “ಬುಕ್ ಆಫ್ ದಿ ಕಮ್ಯುನಿಸ್ಟ್ ಆಫ್ ಪರ್ಫ್ಯೂಮ್ ಅಂಡ್ ಡಿಸಿಟಾಲೇಷನ್”(book of the communist of perfume and distallation) ಇದು ಪರ್ಫ್ಯೂಮ್ ನ ನೂರಕ್ಕಿಂತ ಹೆಚ್ಚು ರೆಸಿಪಿ ಗಳನ್ನು ಹೊಂದಿದೆ.
ಯೂರೋಪಿನಲ್ಲೂ ಕೂಡ ಇದರ ಬಳಕೆ 14ನೇ ಶತಮಾನದಿಂದಲ್ಲೆ ಮಾಡಲಾರಂಭಿಸಿದರು. ನಾನು ಮೊದಲೇ ಹೇಳಿದ್ದೆ, ಪ್ರಾನ್ಸ್ ನಾ ಎಲ್ಲರಿಗೂ ಬಹಳ ಇಷ್ಟ ಎಂದು. ಏಕೆಂದರೆ, ಫ್ರಾನ್ಸ್ ನಲ್ಲಿ ಪರ್ಫ್ಯೂಮ್ ಹಾಗೂ ಕಾಸ್ಮೇಟಿಕ್ ವಸ್ತುಗಳನ್ನು 14ನೇ ಶತಮಾನದಿಂದ ತಯಾರಿಸುತ್ತಿದ್ದರು. ಇದನ್ನು ಪರ್ಫ್ಯೂಮ್ ಜಗತ್ತಿನ ರಾಜಧಾನಿ ಎಂದು ಕರೆದರೆ ತಪ್ಪಾಗದು. ಫ್ರಾನ್ಸ್ ನಲ್ಲಿ ಅತಿ ಹೆಚ್ಚು ಪರ್ಫ್ಯೂಮ್ ಗಳನ್ನು ತಯಾರಿಸುತ್ತಾರೆ ಹಾಗೂ ತುಂಬಾ ಉತ್ತಮ ಸುಗಂಧದ ಪರ್ಫ್ಯೂಮ್ ಗಳಲ್ಲಿ ದೊರಕುತ್ತದೆ.

ಪರ್ಫ್ಯೂಮ್ ಫೋಟೋ

ಫ್ರಾನ್ಸ್ ನ ತುಂಬಾ ಹಳೆಯ ಪರ್ಫ್ಯೂಮ್ ಗಳ ಹೆಸರು…
1. ಗಾಲಿಮ್ರಾಡ್ ಪರ್ಫ್ಯೂಮ್ಯ್ ರ್ (Galimard Parfumeur) 1747.
2. ಮಾಲಿರ್ನಾಡ್ ಪರ್ಫ್ಯೂಮ್ಯ್ ರ್ (Morinard Parfumeur) 1849.
ಈ ಪರ್ಫ್ಯೂಮ್ ಗಳನ್ನು ಇಂಗ್ಲೆಂಡಿನ ರಾಣಿಯರಾದ ರಾಜಹೆನ್ರಿ ಹಾಗೂ ರಾಣಿ ಎಲಿಜಬೆತ್ 1 ಬಳಸುತ್ತಿದ್ದರು.ಆದ್ದರಿಂದ ಫ್ರಾನ್ಸನ್ನು ಪರ್ಫ್ಯೂಮ್ ಗಳ ರಾಜ ಅಥವಾ ರಾಜಧಾನಿ ಎಂದು ಕರೆಯುತ್ತಾರೆ.

ಜಗತ್ತಿನ 05 ಹಳೆಯ ಪರ್ಫ್ಯೂಮ್ ಗಳು

1) ಶಾಲಿಮಾರ್ (Shalimar)
ತಯಾರಿಸಿದ್ದು: ಗೂರ್ ಲೆನ್(Guerlain)
ಇದನ್ನು ಮೊದಲ ಬಾರಿಗೆ ತಯಾರಿಸಿದ ವರ್ಷ: 1925
ಇದು ಸಿಗುವ ಸ್ಥಳ: ಪ್ಯಾರಿಸ್, ಫ್ರಾನ್ಸ್

2) ಚಾನೆಲ್ ನಂ.5(Chanel no 5)
ತಯಾರಿಸಿದ್ದು: ಚಾನೆಲ್ (chanel)
ತಯಾರಿಸಿದ ವರ್ಷ: 1921
ಸಿಗುವ ಸ್ಥಳ: ಪ್ಯಾರಿಸ್, ಫ್ರಾನ್ಸ್

3) ಟಾಬಕ್ ಬ್ಲಾಂಡ್(Tabac Blrnd)
ತಯಾರಿಸಿದ್ದು: ಕಾರೊನ್ (Caron)
ವರ್ಷ: 1919
ಸಿಗುವ ಸ್ಥಳ: ಪ್ಯಾರಿಸ್, ಫ್ರಾನ್ಸ್

4) ರ್ನಾಸಿಸ್ ನ್ಯೊರ್ (Narcisse Nor)
ತಯಾರಿಸಿದ್ದು: ಕಾರೊನ್ (Caron)
ವರ್ಷ: 1911

5) ಫೊಗೆಅರ್ ರಾಯ್ ಲೆ(Fougere Royale)
ತಯಾರಿಸಿದ್ದು: ಹುಬಿಗ್ಯಾಂಟ್ (Houbigant)
ವರ್ಷ: 1882

ಹಳೆ ಕಾಲದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು ಪರ್ಫ್ಯೂಮ್ ಗಳು. ಇವಷ್ಟೇ ಮಾತ್ರವಲ್ಲದೆ ಹೆಚ್ಚು ಇವೆ. ನಾವು ಪರ್ಫ್ಯೂಮ್ ಅನ್ನೂ ನೋಡಿದಾಗ ಇದರ ಮಾರ್ಕೆಟಿಂಗ್ ಮುಂಚೆಯಿಂದಲೂ ಹೆಚ್ಚಿದೆ ಹಾಗೂ ಇದರ ಸ್ಟಾರ್ಡನ್ ಅನ್ನು ಕಳೆದುಕೊಂಡಿಲ್ಲ.
ನಮ್ಮ ಭಾರತಕ್ಕೆ ಬಂದರೆ, ಪರ್ಫ್ಯೂಮ್ ನ ಕ್ರೇಜ್ ಹೆಚ್ಚಾಗಿ ಯುವಜನತೆಯಲ್ಲಿ ನೋಡಬಹುದು. ಯುವಜನತೆ ಬಿಟ್ಟರೆ ಬಿಸಿನೆಸ್ ಫೀಲ್ಡಿನಲ್ಲಿ ಇರುವವರು ಹೆಚ್ಚಾಗಿ ಬಳಸುತ್ತಾರೆ.

ಪ್ರಸ್ತುತ ಭಾರತದ ಐದು ಪರ್ಫ್ಯೂಮ್ ಗಳು

1. ಪುರುಷರಿಗಾಗಿ Fogg Xtremo ಪರಿಮಳ (Fogg Xtremo Scent For Men)
2. ಬೆಲ್ಲಾ ವೀಟಾ ಆರ್ಗ್ಯಾನಿಕ್ ಮ್ಯಾನ್ ಪರ್ಫ್ಯೂಮ್ (Bella Vita Organic Man Perfume)
3. ಪುರುಷರಿಗಾಗಿ ಮ್ಯಾನ್ ಕಂಪನಿ ಬ್ಲಾಂಕ್ ಪರ್ಫ್ಯೂಮ್(The Man Company Blanc Perfume for Men)
4. ಸ್ಕಿನ್ ಬೈ ಟೈಟಾನ್ ಮಹಿಳೆಯರ ಯೂ ಡಿ ಪರ್ಫಮ್ (SKINN BY TITAN Women’s Eau De Parfum)
5. ಮಹಿಳೆಯರಿಗಾಗಿ ಜೋವನ್ ವೈಟ್ ಮಸ್ಕ್ ಕಲೋನ್ ಸ್ಪ್ರೇ (Jovan White Musk for Women Cologne Spray)

ಪ್ರಸ್ತುತ ಭಾರತದಲ್ಲಿ ಈ 5 ಪರ್ಫ್ಯೂಮ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇತ್ತೀಚಿಗಂತೂ ಪರ್ಫ್ಯೂಮ್ ಗಳು ದಿನನಿತ್ಯದ ಅಗತ್ಯದ ವಸ್ತುಗಳಂತೆ ಆಗಿದೆ. ಪರ್ಫ್ಯೂಮ್ ಅನ್ನು ಬಳಸುವುದು ಅವರವರ ವೈಯಕ್ತಿಕ ವಿಷಕ್ಕೆ ಬಿಟ್ಟದ್ದು. ಅವರು ಯಾವ ಪರ್ಫ್ಯೂಮ್ ಅನ್ನು ಬಳಸುತ್ತಾರೆ ಹಾಗೂ ಯಾವ ಫ್ಲೇವರ್ ಇಷ್ಟಪಡುತ್ತಾರೆ.
ಬಾಲಿವುಡ್ ಸೆಲಿಬ್ರಿಟಿ ಆದ ಆಲಿಯಾ ಭಟ್ ಗೆ ಹುಡುಗರ ಪರ್ಫ್ಯೂಮ್ ಅನ್ನು ಬಳಸುವುದು ಬಹಳ ಇಷ್ಟವಂತೆ. ಅದೇ ನಾನು ಮೊದಲೇ ಹೇಳಿದಂತೆ ಪರ್ಫ್ಯೂಮ್ ಗಳು ಬಳಸುವುದು ಅವರವರ ಇಚ್ಚೆಗೆ ಸಂಬಂಧಪಟ್ಟಂತೆ.

Perfume is not only for fragrance,
it’s behind the attachment.

ಸಂಗ್ರಹಣೆ
ಛಾಯಾಚಿತ್ರ: ಗೂಗಲ್

@thebeautyoffashion053

Leave a comment

Design a site like this with WordPress.com
Get started