ಫ್ಯಾಶನ್ ವೀಕ್ ಎಂಬ ಪದ ಎಲ್ಲರಿಗೂ ತಿಳಿದೇ ಇರುತ್ತದೆ. ಫ್ಯಾಶನ್ ವೀಕ್ ಎನ್ನುವುದು ಫ್ಯಾಶನ್ ಇಂಡಸ್ಟ್ರಿಯ ಬಹುದೊಡ್ಡ ಈವೆಂಟ್ ಆಗಿದ್ದು, ಇದು ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸುಮಾರು ಒಂದು ವಾರದವರೆಗೆ ನಡೆಯುತ್ತದೆ. ಇದರಲ್ಲಿ ಫ್ಯಾಶನ್ ಡಿಸೈನರ್ ಗಳು ತಾವು ಡಿಸೈನ್ ಮಾಡಿದಂತಹ ಉಡುಪುಗಳನ್ನು ರನ್ ವೇ ಮೂಲಕ ಖರೀದಿದಾರರು ಮತ್ತು ಮಾಧ್ಯಮಗಳಿಗೆ ಪ್ರದರ್ಶಿಸುತ್ತಾರೆ. ಫ್ಯಾಶನ್ ವೀಕ್ ಎನ್ನುವುದು ಫ್ಯಾಶನ್ ಡಿಸೈನರ್ ಗಳಿಗೆ ಮುಖ್ಯವಾದ ಈವೆಂಟ್. ಏಕೆಂದರೆ, ಇದರ ಮೂಲಕ ತಮ್ಮ ನವನವೀನವಾದ ಡಿಸೈನರ್ ಉಡುಪುಗಳನ್ನು ಜಗತ್ತಿಗೆ ತೋರಿಸಿ ಅವರದೇ ಆದ ಛಾಪನ್ನು ಮೂಡಿಸಬಹುದು. ಅವರದೇ ಆದ ಬ್ರಾಂಡ್ ಅನ್ನು ನಿರ್ಮಿಸಿದ ನಂತರ ಅಭಿಮಾನಿಗಳು ಹೆಚ್ಚಾಗುತ್ತಾರೆ. ಅವರಿಗೆ ಇನ್ನು ಹೆಚ್ಚು ಸೆಲೆಬ್ರೆಟಿಗಳ ಉಡುಪುಗಳನ್ನು ಡಿಸೈನ್ ಮಾಡಲು ಸಿಗುತ್ತದೆ.
ಫ್ಯಾಶನ್ ವೀಕ್ ಬರೀ ಫ್ಯಾಶನ್ ಡಿಸೈನರ್ ಗಳಿಗೆ ಮಾತ್ರ ಮುಖ್ಯವಾದ ಈವೆಂಟ್ ಅಲ್ಲ, ಅವರ ಜೊತೆಯಲ್ಲಿ ಮಾಡೆಲ್ಸ್ ಮತ್ತು ಮೇಕಪ್ ಆರ್ಟಿಸ್ಟ್ ಗಳಿಗೂ ಮುಖ್ಯವಾದ ಈವೆಂಟ್ ಆಗಿದೆ. ಫ್ಯಾಶನ್ ವೀಕ್ ನಲ್ಲಿ ಮೇನ್ ಮಾಡೆಲ್ ಆಗಬೇಕಾದರೆ ಬಹಳ ಕಷ್ಟವಿದೆ. ಸಣ್ಣಪುಟ್ಟ ಫ್ಯಾಶನ್ ವೀಕ್ ನಲ್ಲಿ ಮೇನ್ ಮಾಡೆಲ್ ಆದರೂ ಹೆಸರಾಂತ ಉದಾಹರಣೆಗೆ: ಲಂಡನ್ ಫ್ಯಾಶನ್ ವೀಕ್, ಪ್ಯಾರಿಸ್ ಫ್ಯಾಷನ್ ವೀಕ್ ಮತ್ತು ಲಾಕ್ಮೆ ಫ್ಯಾಷನ್ ವೀಕ್ ಗಳಲ್ಲಿ ಮೇನ್ ಮಾಡೆಲ್ ಆಗುವುದು ಕೊಂಚ ಕಷ್ಟದ ಕೆಲಸ. ಒಂದು ಸಲ ಹೆಸರಾಂತ ಫ್ಯಾಶನ್ ವೀಕ್ ನಲ್ಲಿ ಮೇನ್ ಮಾಡೆಲ್ ಆಗಿ ರನ್ ವೇಲ್ಲಿ ramp walk ಮಾಡಿದರೆ, ಅವರ ಜೀವನವೇ ಬದಲಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.

ಫ್ಯಾಷನ್ ವೀಕ್ ನ ಪರಿಕಲ್ಪನೆಯು ಪ್ಯಾರಿಸ್ ನಲ್ಲಿ ಪ್ರಾರಂಭವಾಯಿತು, ಮಾರಾಟಗಾರರು ಸಾರ್ವಜನಿಕ ಸ್ಥಳಗಳಲ್ಲಿ, ರೇಸ್ ಟ್ರಾಕ್ ಗಳಿಂದ ಬ್ಯೂಟಿ ಸಲೂನ್ ಗಳವರೆಗೆ ಕೌಚರ್ ವಸ್ತುಗಳನ್ನು ಧರಿಸಲು ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದ್ದರು. ಈ ಮೆರವಣಿಗೆಗಳು ಕ್ರಮೇಣವಾಗಿ ತಮ್ಮದೇ ಆದ ಸಾಮಾಜಿಕ ಘಟನೆಗಳಾಗಿ ಮಾರ್ಪಟ್ಟವು. ಫ್ರಾನ್ಸ್ ನಲ್ಲಿ ರನ್ ವೇ ಪ್ರದರ್ಶನವನ್ನು ಇನ್ನು “ಡೆಫಿಲೆಸ್ ಡಿ ಮೋಡ್”(Defiles de mode) ಎಂದು ಕರೆಯಲಾಗುತ್ತದೆ. ಇದರ ಅನುವಾದವೇ “ಫ್ಯಾಶನ್ ಮೆರವಣಿಗೆ”(Fashion Parades).
ಸ್ಟೈಲ್ ಶೋ ಎನ್ನುವುದು ಸ್ಟೈಲ್ ಪ್ಲಾನರ್ ನಿಂದ ಮುಂಬರುವ ಫ್ಯಾಷನ್ ವೀಕ್ ನಲ್ಲಿ ತಮ್ಮ ಮುಂಬರುವ ಉಡುಗೆ ಮತ್ತು ಅಲಂಕಾರಿಕಗಳನ್ನು ಪ್ರದರ್ಶಿಸುವ ಸಂದರ್ಭವಾಗಿದೆ. 1903ರಲ್ಲಿ ಎಹ್ರಿಚ್ ಬ್ರದರ್ಸ್ ಎಂಬ ಅಂಗಡಿಯೂ ಮಧ್ಯಮ ವರ್ಗದ ಮಹಿಳೆಯರನ್ನು ಅಂಗಡಿಗೆ ತಿಳಿಯಲು ಫ್ಯಾಶನ್ ವೀಕ್ ಅನ್ನು ನಡೆಸುತ್ತಿದ್ದರು. 1910ರ ಹೊತ್ತಿಗೆ, ಅನೇಕ ದೊಡ್ಡ ಮಳಿಗೆಗಳು ತಮ್ಮದೇ ಆದ ಪ್ರದರ್ಶನಗಳನ್ನು ನಡೆಸಲಾರಂಭಿಸಿದರು.
ಪ್ರಪಂಚದಾದ್ಯಂತ ಅನೇಕ ಗಮನಾರ್ಹ ವಾದ ಫ್ಯಾಶನ್ ವಿಗಳು ಇದ್ದರು, ಕೇವಲ ನಾಲ್ಕು”ಬಿಗ್ ಫೋರ್”(big four) ಎಂದು ಕರೆಯಲಾಗುತ್ತದೆ. ಅದು ಯಾವುವು ಎಂದರೆ, ಪ್ಯಾರಿಸ್, ಮಿಲನ್, ಲಂಡನ್ ಮತ್ತು ನ್ಯೂಯಾರ್ಕ್. ಪ್ಯಾರಿಸ್ 1945ರಲ್ಲಿ ಕೌಚರ್ ಶೋಗಳನ್ನು ನಡೆಸಲು ಆರಂಭಿಸಿತು, ಮಿಲನ್ ಫ್ಯಾಶನ್ ವೀಕ್ ಅನ್ನು ಇಟಾಲಿಯನ್ ಚೇಂಬರ್ ಆಫ್ ಕಾಮರ್ಸ್ 1958ರಲ್ಲಿ ಪಾಪ ಸಿದ್ದು, ಪ್ಯಾರಿಸ್ ಫ್ಯಾಶನ್ ವೀಕ್ ಅನ್ನು 1973ರಲ್ಲಿ ಫ್ರೆಂಚ್ ಫ್ಯಾಶನ್ ಫೆಡರೇಷನ್ ಅಡಿಯಲ್ಲಿ ಆಯೋಜಿಸಲಾಯಿತು ಲಂಡನ್ ಫ್ಯಾಷನ್ ವೀಕ್ ಅನ್ನೋ ಬ್ರಿಟಿಷ್ ಫ್ಯಾಶನ್ ಕಾನ್ಸರ್ 1984ರಲ್ಲಿ ಸ್ಥಾಪಿಸಿತು. ಈ ಪ್ರಮುಖ ಸಂಸ್ಥೆಗಳು ಇನ್ನೂ ಮುಖ್ಯ ಪ್ರದರ್ಶನಗಳನ್ನು ಆಯೋಜಿಸುತ್ತಿದೆ.
ಇನ್ನು ಮುಂದೆ ಭಾರತಕ್ಕೆ ಬಂದರೆ, ಫ್ಯಾಶನ್ ಇಂಡಸ್ಟ್ರಿ ಇರುವುದೇ ಬಾಂಬೆ ಅಥವಾ ಮುಂಬೈನಲ್ಲಿ. ಭಾರತದಲ್ಲಿ ಫ್ಯಾಶನ್ ಎಂದ ತಕ್ಷಣ ನೆನಪಾಗುವುದು ಮುಂಬೈ. ಏಕೆಂದರೆ, ಇಲ್ಲಿ ಫ್ಯಾಶನ್ ಇಂಡಸ್ಟ್ರಿ ಮತ್ತು ಬಾಲಿವುಡ್ ಇರುವುದು. ಯಾರಾದರೂ ನಾನು ಫ್ಯಾಶನ್ ಇಂಡಸ್ಟ್ರಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರೆ ಮೊದಲು ಹೋಗುವುದೇ ಮುಂಬೈಗೆ. ಮುಂಬೈನಲ್ಲಿ ಮಾತ್ರ ಫ್ಯಾಶನ್ ಇಂಡಸ್ಟ್ರಿ ಮತ್ತು ಫ್ಯಾಶನ್ ವೀಕ್ ನಡೆಯುವುದು ಎಂದಲ್ಲ, ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಕಲ್ಕತ್ತಾ ಮತ್ತು ದೆಹಲಿಯಲು ನಡೆಯುತ್ತದೆ. ಆದರೆ, ಕೊಂಚ ಕಡಿಮೆ. ಏಕೆಂದರೆ, ಪ್ರಸಿದ್ಧ ವ್ಯಕ್ತಿಗಳು ಮುಂಬೈನಲ್ಲಿ ಇರುತ್ತಾರೆ ಹಾಗೂ ಯಾವುದೇ ಬ್ರಾಂಡ್ ಭಾರತಕ್ಕೆ ಬಂದರು ಮೊದಲು ಹೋಗುವುದೇ ಮುಂಬೈಗೆ.
ಭಾರತದ ಟಾಪ್ 10 ಫ್ಯಾಷನ್ ವೀಕ್ ಅಥವಾ ಶೋಗಳು.
1. ಲ್ಯಾಕ್ಮಿ ಫ್ಯಾಷನ್ ವೀಕ್ (Lakme fashion week)
2. ವಿಲ್ಸ್ ಲೈಫ್ ಸ್ಟೈಲ್ಲೆ ಇಂಡಿಯ ಫಾಶನ್ ವೀಕ್ (Willis lifestyle India fashion week)
3. ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ (India bridal fashion week)
4. ರಾಜಸ್ಥಾನ್ ಫಾಶನ್ ವೀಕ್ (Rajasthan fashion week)
5. ವ್ಯಾನ್ ಹ್ಯೂಸೆನ್ ಇಂಡಿಯಾ ಪುರುಷರ ವಾರ (Ven Heusen India men’s week)
6. ಸಿನರ್ಜಿ 1 ದೆಹಲಿ ಕೌಚರ್ ವೀಕ್ (synergy 1 Delhi couture week)
7. ಉತ್ತರ ಭಾರತದ ಫ್ಯಾಷನ್ ವೀಕ್ (North India fashion week)
8. ಇಂದೋರ್ ಫ್ಯಾಷನ್ ವೀಕ್ (Indore fashion week) 9. ಹೈದ್ರಾಬಾದ್ ಫ್ಯಾಷನ್ ವೀಕ್ (Hyderabad fashion week)
10. ಚೆನ್ನೈ ಫ್ಯಾಶನ್ ವೀಕ್ (Chennai fashion week)
ಭಾರತದ ಟಾಪ್ 5 ಫ್ಯಾಶನ್ ಡಿಸೈನರ್ ಗಳು
a. ಮನೀಶ್ ಮಲ್ಹೋತ್ರ (Manish Malhotra)
b. ರೋಹಿತ್ ಬಾಲ್ (Rohit Bal)
c. ತರುಣ್ ತಹಿಲಿಯಾನಿ (Tarun Tahiliani)
d. ರಿತು ಕುಮಾರ್ (Ritu Kumar)
e. ಸಬ್ಯಸಾಚಿ ಮುಖರ್ಜಿ (Sabyasachi Mukherjee)
ಭಾರತದ ಟಾಪ್ 5 ಮಹಿಳಾ ಮಾಡಲ್ಸ್ ಗಳು
a. ನಿಧಿ ಸುನಿಲ್ (Nidhi Sunil)
b. ಸೋನಿ ಕೌರ್ (Sony kaur)
c. ಊರ್ವಶಿ ರೌಟೇಲಾ (Urvashi Ruatela)
d. ಅರ್ಚನಾ ಅಕಿಲ್ ಕುಮಾರ್ (Archana Akil Kumar)
e. ಎರಿಕಾ ಪ್ಯಾರ್ಕ (Erika packara)
ಭಾರತದ ಟಾಪ್ 5 ಪುರುಷ ಮಾಡಲ್ಸ್ ಗಳು
a. ಮಿಲಿಂದ್ ಸೋಮನ್ (Milind Soman)
b. ರೋಹಿತ್ ಖಂಡೇಲ್ವಾಲ್ (Rohit Khandelwal)
c. ಮೀರ್ ಅಲಿ (Meer Ali)
d. ಅಂಗದ ಬೇದೆ (Angad Bedi)
e. ಸಾಹಿಲ್ ಶ್ರಾಫ್ (Sahil Shroff)
ಭಾರತದಲ್ಲಿ ಫ್ಯಾಷನ್ ವೀಕ್ ಇವೆಂಟ್ 33 ಫ್ಯಾಶನ್ ಡಿಸೈನರ್ ಗಳನ್ನು ಒಳಗೊಂಡಂತೆ 2000 ದಶಕದಲ್ಲಿ ನಡೆಯಿತು. ಭಾರತದ ಫ್ಯಾಶನ್ ವೀಕ್ ನಲ್ಲಿ ಲ್ಯಾಕ್ಮೆ ಫ್ಯಾಷನ್ ವೀಕ್ ಪ್ರಥಮ ಸ್ಥಾನ ಪಡೆದುಕೊಂಡಿದೆ. ಭಾರತದ ಫ್ಯಾಶನ್ ವೀಕ್ ನಲ್ಲಿ ಹೊಸ ಫ್ಯಾಶನ್ ಡಿಸೈನರ್ ಗಳಿಗೆ, ಮಾಡೆಲ್ ಮತ್ತು ಮೇಕಪ್ ಆರ್ಟಿಸ್ಟ್ ಗಳ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
ಭಾರತದ ಫ್ಯಾಶನ್ ವೀಕ್ ನಲ್ಲಿ ಹೆಚ್ಚಾಗಿ ಮೇನ್ ಮಾಡೆಲ್ ನ ಬಾಲಿವುಡ್ ನ ನಟ-ನಟಿಯರನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ಏಕೆಂದರೆ, ಇವರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುತ್ತಾರೆ.
ಫ್ಯಾಶನ್ ಡಿಸೈನರ್ ಗಳ ಜೊತೆಯಲ್ಲಿ ಮಾಡೆಲ್ ಗಳ ಜೀವನದಲ್ಲಿ ಫ್ಯಾಶನ್ ವೀಕ್ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
ಸಂಗ್ರಹಣೆ
1) The Newdmen
2) JD institute of fashion technology
3 )Wikipedia
ಛಾಯಾಚಿತ್ರ
1) ಗೂಗಲ್