ಜೀವನಕ್ಕೆ ಫ್ಯಾಶನ್ ಬೇಕಾ?

ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಬಾರಿಯಾದರೂ ತಮ್ಮ ಜೀವನದಲ್ಲಿ, ಜೀವನವನ್ನು ನಿಭಾಯಿಸಲು ಫ್ಯಾಶನ್ ಬೇಕಾ ಎಂಬ ಪ್ರಶ್ನೆಯನ್ನು ಕೇಳಿಕೊಂಡಿರುತ್ತಾರೆ. ಏಕೆಂದರೆ, ಹಿಂದಿನ ಕಾಲದಲ್ಲಿ ಜನರು ಫ್ಯಾಶನ್ ಎಂಬ ಪದವನ್ನು ಕೇಳಿಯೇ ಇರಲಿಲ್ಲ. ಆದರೂ ಕೂಡ ಜೀವನ ಮಾಡುತ್ತಿರಲಿಲ್ವ!. ಆದರೆ, ಇಂದಿನ ಯುಗದ ಜನರ ಮೇಲೆ ಫ್ಯಾಷನ್ ಎಂಬ ಪದ ಏಕೆ ಅಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದೆ.

ನಮಗೆ ಫ್ಯಾಶನ್ ಬೇಕಾ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿಯಲ್ಲಿ ಇರುತ್ತದೆ. ಏಕೆಂದರೆ, ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿ ಯೋಚಿಸುವುದಿಲ್ಲ. ಕೆಲವರು ಬೇಕು ಎಂದರೆ, ಇನ್ನು ಕೆಲವರು ನಮಗೆ ಫ್ಯಾಶನ್ ಬೇಡ ಎನ್ನುತ್ತಾರೆ ಮತ್ತು ಇನ್ನಷ್ಟು ಜನರು ಕೆಲವೊಂದು ಬಾರಿ(ಸಾಂದರ್ಭಿಕವಾಗಿ) ಪ್ಯಾಶನ್ ಮಾಡುವುದು ತಪ್ಪೇನೂ ಅಲ್ಲ ಆದರೆ ಅದು ಮಿತಿ ಮೀರಬಾರದು ಎನ್ನುತ್ತಾರೆ.

ಕೆಲ ಜನರ ಪ್ರಕಾರ ಬರೀ ಹೆಣ್ಣು ಮಕ್ಕಳು ಮಾತ್ರ ಫ್ಯಾಶನ್ ಮಾಡುತ್ತಿದ್ದಾರೆ ಹೊರತು ಇನ್ಯಾರೂ ಕೂಡ ಮಾಡುವುದಿಲ್ಲ. ಅವರ ಅಭಿಪ್ರಾಯ ತಪ್ಪೆಂದು ವಾದಿಸುತ್ತೇವೆ. ಫ್ಯಾಶನ್ ಎಂಬ ಪದ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?, ಪ್ರತಿಯೊಬ್ಬರಿಗೂ ಇಷ್ಟ. ಆದರೆ, ಕೆಲವರು ಹೇಳಿಕೊಳ್ಳುತ್ತಾರೆ ಅಥವಾ ತೋರಿಸಿಕೊಳ್ಳುತ್ತಾರೆ, ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ. ಅದು ಸಾಂದರ್ಭಿಕವಾಗಿಯು ಇರಬಹುದು ಅದು ಅವರವರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಿದ್ದು.

ಹಿಂದಿನ ಕಾಲದ ಪಾಶನ್ ಫೋಟೋ

ಇನ್ನು ಜೀವನಕ್ಕೆ ಫ್ಯಾಶನ್ ಬೇಕಾ ಎಂಬ ಪ್ರಶ್ನೆಯ ಕಡೆ ಬಂದರೆ, ಮೊದಲೇ ತಿಳಿಸಿದ ಹಾಗೆ ಕೆಲವರ ಪ್ರಕಾರ ಹಿಂದಿನ ಕಾಲದವರು ಫ್ಯಾಶನ್ ಎಂಬ ಪದವು ಕೂಡ ಕೇಳಿರಲಿಲ್ಲ ಆದರೂ ಅವರು ಜೀವನ ನಡೆಸುತ್ತಿರಲಿಲ್ಲವೇ‌. ಇವಾಗ ಮಾತ್ರ ಏಕೆ ಫಾಶನ್ ಇಷ್ಟು ಮುಖ್ಯವಾಗಿದೆ.

ಯಾರಾದರೂ ಕೂಡ ಜೀವನಕ್ಕೆ ಫ್ಯಾಶನ್ ಬೇಕು ಅಥವಾ ಬೇಡ ಎಂದು ಹೇಳಲಾಗುವುದಿಲ್ಲ. ಆದರೆ; ಫ್ಯಾಶನ್ ಬೇಕು ಎಂದರೆ ಏಕೆ?, ಬೇಡವೆಂದರೆ ಏಕೆ? ಎಂಬುದರ ಬಗ್ಗೆ ಚರ್ಚೆ ಮಾಡಬಹುದು ಅಷ್ಟೇ.

ಕಾಲ ಬದಲಾದಂತೆ, ಜನರು ಕೂಡ ಬದಲಾಗುವುದು ಸಹಜ. ಇದಕ್ಕೆ ಒಂದು ಗಾದೆಯು ಸಹ ಇದೆ. ಅದೇನೆಂದರೆ, ಕಾಲಕ್ಕೆ ತಕ್ಕಂತೆ ಬದಲಾಗು. ಮನುಷ್ಯ ಸಂಘಜೀವಿ, ಯಾವತ್ತಿಗೂ ಕೂಡ ಒಂಟಿಯಾಗಿ ಬಾಳಲು ಇಷ್ಟಪಡುವುದಿಲ್ಲ‌. ಮಾನವ ಇನ್ನೊಬ್ಬರನ್ನು ಅನುಸರಿಸುವುದು ಹೆಚ್ಚು. ತನಗಿಂತ ಇನ್ನೊಬ್ಬರನ್ನು ಅನುಸರಿಸುವ ಆಸೆ ಅವನಿಗೆ. ಮೊದಲೆಲ್ಲಾ ಫ್ಯಾಷನ್ ಇಲ್ಲವೆಂದು ಹೇಳುತ್ತಾರಲ್ಲ, ಅವರಲ್ಲಿ ನನ್ನದೊಂದು ಪ್ರಶ್ನೆ. ಯಾರು ಫ್ಯಾಶನ್ ಮಾಡಿಲ್ಲ?, ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಫ್ಯಾಷನ್ ಇತ್ತು. ಖಂಡಿತ ನಿಜ ಇಂದಿನ ಕಾಲದಲ್ಲಿ ಫ್ಯಾಶನ್ ಎಂಬ ಪದ ಕೆಲವರು ಕೇಳಿಯೇ ಇಲ್ಲದಿರಬಹುದು, ಆದರೂ ಕೂಡ ಅವರವರ ಸಂಸ್ಕೃತಿಗೆ ತಕ್ಕಂತೆ ಫ್ಯಾಶನ್ ಮಾಡುತ್ತಿದ್ದರು. ಇಂದಿನ ಯುಗದಲ್ಲಿ ವೆಸ್ಟ್ರನ್ ಉಡುಗೆ ತೊಡುಗೆಯ ಕಡೆ ಭಾರತದ ಜನರು ಹೋಗುತ್ತಿದ್ದಾರೆ. ಆದರೂ ಕೂಡ ತಮ್ಮ ಸಂಸ್ಕೃತಿಯನ್ನು ಮರೆತಿಲ್ಲ. ಹೇಗೆ ವೇಸ್ಟ್ ಕಲ್ಚರ್ ನಲ್ಲಿ ಫ್ಯಾಷನ್ ಮಾಡಲು ತಿಳಿದಿದ್ದಾರೆ, ಅದೇ ರೀತಿಯಲ್ಲಿ ಅವರವರ ಸಂಸ್ಕೃತಿಯಲ್ಲೂ ಫ್ಯಾಶನ್ ಮಾಡಲು ಬರುತ್ತದೆ.

ಇವತ್ತಿನ ಕಾಲದ ಫಾಶನ್ ಫೋಟೋ

ಹಿಂದಿನ ಕಾಲದ ಜನರು ತಮ್ಮ ಸಂಸ್ಕೃತಿಯನ್ನು ಅನುಸರಿಸಲು ಇಚ್ಚಿಸುತ್ತಿದ್ದರು. ಇದಕ್ಕೆ ಕಾರಣವೆಂದರೆ ಪ್ರಪಂಚದಲ್ಲಿ ಯಾವುದೇ ದೇಶ,ರಾಜ್ಯ ಮತ್ತು ಹಳ್ಳಿಯಲ್ಲಾದರೆ ಅವರವರ ಸಂಸ್ಕೃತಿಯನ್ನು ಅನುಸರಿಸುತ್ತಿದ್ದರು. ಏಕೆಂದರೆ, ಸಂಪರ್ಕದ ಕೊರತೆ. ಬೇರೆಯವರ ಸಂಸ್ಕೃತಿಯನ್ನು ನೋಡಬೇಕಿದ್ದರೆ ಅವರ ಸ್ಥಳಕ್ಕೆ ಹೋಗಬೇಕಿತ್ತು. ಅದು ಸಾಧ್ಯವಾದಾಗ ಯಾರು ಬೇರೆಯವರ ಸಂಸ್ಕೃತಿಯನ್ನು ನೋಡಿದರೂ ಅವರ ಮೂಲಕ ತಿಳಿದುಕೊಳ್ಳಬೇಕಿತ್ತು ಹೊರತು ಬೇರೆ ಯಾವುದೇ ಮಾರ್ಗವಿರಲಿಲ್ಲ.

20ನೇ ಶತಮಾನದ ಪೀಳಿಗೆಯವರಿಗೆ ಈ ತೊಂದರೆ ಇಲ್ಲ. ಇವರ ಬೆರಳಿನ ತುದಿಯಲ್ಲಿ ಇಡೀ ಪ್ರಪಂಚ ನಿಂತಿದೆ, ಇದಕ್ಕೆ ಮೂಲಕಾರಣ ಅಂತರ್ಜಾಲ. ಅಂತರ್ಜಾಲವು ಪ್ರಪಂಚವನ್ನೇ ಒಂದು ಸಣ್ಣ ಹಳ್ಳಿಯನ್ನಾಗಿ ಮಾಡಿದೆ. ತಾವು ಯಾವುದಾದರೂ ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಯಸಿದರೆ ನಿಮಿಷದಲ್ಲಿ ಅವರಿಗೆ ಆ ವಿಷಯ ತಲುಪುತ್ತದೆ ಹಾಗೂ ತಿಳಿದುಕೊಳ್ಳುತ್ತಾರೆ. ಅಂತದರಲ್ಲಿ ಬೇರೆಯವರ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ ಹಾಗೂ ಇಚ್ಚಿಸಿದರೆ ಅನುಸರಿಸಬಹುದು.

ಯುವಜನತೆ ತಮ್ಮ ಜೀವನದಲ್ಲಿ ಫ್ಯಾಷನ್ ಅನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗದು. ತಾವು ಸಮಾಜದ ಮುಂದೆ ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ಆಕರ್ಷಿತವಾಗಿ ಕಾಣಬೇಕು ಹಾಗೂ ಎಲ್ಲರ ಮಧ್ಯೆ ಅಥವಾ ಸಮಾಜದಲ್ಲಿ ಪ್ರಸಿದ್ಧರಾಗಬೇಕು ಎಂಬ ಆಸೆ ಎಲ್ಲರಲ್ಲಿ. ಅದು ತಮ್ಮ ಉಡುಗೆ-ತೊಡುಗೆ, ಹಾವ-ಭಾವ ಮತ್ತು ಮುಂತಾದುವುದರಿಂದ ಇರಬಹುದು.

Fashion is necessary for our life…

ತಮ್ಮದೇಯಾದ ಬ್ರಾಂಡ್ ಅನ್ನು ನಿರ್ಮಿಸಲು ಫ್ಯಾಶನ್ ಬಹಳ ಮುಖ್ಯ. ಅದು ಉಡುಗೆ, ಬಿಹೇವಿಯರ್, ವಾಕಿಂಗ್ ಸ್ಟೈಲ್ ಮತ್ತು ಟಾಕಿಂಗ್ ಸ್ಟೈಲ್ ಮುಂತಾದವು ಆಗಿರಬಹುದು.
ಜೀವನಕ್ಕೆ ಪ್ಯಾಶನ್ ಅನ್ನು ಅಳವಡಿಸಿಕೊಳ್ಳುವುದು ಅವರವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದೆ, ಅದನ್ನು ಯಾರೂ ಕೂಡ ಪ್ರಶ್ನಿಸಬಾರದು.

ತನ್ನ ಜೀವನದ ಒಡೆಯ ತಾವೇ
ಇದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ…!

ಸಂಗ್ರಹಣೆ
ಛಾಯಾಚಿತ್ರ(ಫೋಟೋಸ್)
1) ಗೂಗಲ್

Leave a comment

Design a site like this with WordPress.com
Get started