ಓಲ್ಡ್ ಇಸ್ ಗೋಲ್ಡ್ ಎಂಬ ಮಾತು ಏಕೆ ಬಂತು ಎಂದರೆ, ಯಾವತ್ತಿಗೂ ಕೂಡ ಹಳೆಯದು ನವನವೀನ. ಅದು, ಬಟ್ಟೆಯಲ್ಲಿ ಆಗಿರಬಹುದು ಮತ್ತು ಜೀವನಶೈಲಿಯಲ್ಲಿ ಆಗಿರಬಹುದು. ಮನುಷ್ಯ ಎಂಥಾ ಜೀವಿಯೆಂದರೆ, ಕಡಿಮೆ ಬುದ್ಧಿಶಕ್ತಿ ಹೊಂದಿರುವಂತಹ ಜೀವಿ. ಹೊಸತನ ಅಥವಾ ಯಾವುದಾದರೂ ಹೊಸದು ಬಂದರೆ ಹಳೆಯದನ್ನು ಬಹಳ ಜಲ್ದಿ ಮರೆಯುತ್ತಾನೆ. ಹೊಸದು ಬಂತು ಎಂದ ತಕ್ಷಣ ಅದನ್ನು ಅಳವಡಿಸಿಕೊಳ್ಳುವ ಆತುರ. ಆದರೆ ಹಳೆಯದು ಎಂದಿಗೂ ಮಾಸುವುದಿಲ್ಲ, ಇದು ಒಂದು ರೀತಿಯ ಮುಚ್ಚಿದ ಕೆಂಡ ದಲ್ಲಿ ಇರುವ ಬೆಂಕಿಯಾಗಿ, ಯಾವಾಗ ಬೇಕಾದರೂ ಹೊರಬರಬಹುದು. ಹಾಗೆಯೇ ಎಷ್ಟೇ ಹೊಸದು ಬಂದರು ಹಳೆಯದನ್ನು ಮರೆಯಲು ಸಾಧ್ಯವಿಲ್ಲ.
ಇಂದು ಇಲ್ಲಿ ನಾನು ಮಾತನಾಡುತ್ತಿರುವ ವಿಷಯವೆಂದರೆ, ಉಡುಪು (ಬಟ್ಟೆ). 5ರಿಂದ6 ವರ್ಷಗಳ ಹಿಂದೆ ನೋಡಿದರೆ ನಮ್ಮ ಜನರು. ಅಂದರೆ, ಮುಖ್ಯವಾಗಿ ಭಾರತದವರು ಹೆಚ್ಚು ವೆಸ್ಟ್ರನ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಆರಂಭಿಸಿದರು. ಇಂದಿಗೆ ವೆಸ್ಟ್ರನ್ ಸಂಸ್ಕೃತಿ ಸಂಪೂರ್ಣವಾಗಿ ಭಾರತದಿಂದ ಹೋಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಹಳೆಯ ಸಂಸ್ಕೃತಿಯ ಉಡುಪುಗಳನ್ನು ಸಾಂಪ್ರದಾಯಿಕ (ಮದುವೆ, ಹಬ್ಬ ಹರಿದಿನ ಮತ್ತು ಮುಂತಾ) ದಿನಗಳಲ್ಲಿ ಹೆಚ್ಚಾಗಿ ತೊಡಲು ಆರಂಭಿಸುತ್ತಿದ್ದಾರೆ. ನಾವು ಎಷ್ಟೇ ಕೂಡ ಬೇರೆಯವರ ಸಂಸ್ಕೃತಿಯನ್ನು ಅನುಸರಿಸಿದ್ದರು ಸಹ ನಮ್ಮ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ. ಉಡುಪಿನ ವಿಷಯಕ್ಕೆ ಬಂದರೆ ಹಳೆಯದು ನವನವೀನ ಎಂದು ಹೇಳಬಹುದು. ಇದರಲ್ಲಿ ಹೆಣ್ಣುಮಕ್ಕಳ ಉಡುಪುಗಳಲ್ಲಿ ಹೆಚ್ಚಾಗಿ ಇಂದಿನ ಕಾಲದ ಡಿಸೈನ್ಗಳು ನೋಡಬಹುದು.
ಪ್ರಮುಖವಾದುದನ್ನು ತಿಳಿಸಲು ಇಚ್ಚಿಸುತ್ತೇನೆ.
ಮೊದಲನೆಯದಾಗಿ, ಹೆಣ್ಣುಮಕ್ಕಳು ತೊಡುವಂತಹ ಸೀರೆಗಳ ರವಿಕೆ (ಬ್ಲೌಸ್).
ಬಾರ್ಡರ್ ಗಳ ಮೇಲೆ ಬಫ್ ತೋಳು...
ಇದು ಹಿಂದಿನ ಕಾಲದವರು ಹೆಚ್ಚಾಗಿ ಬಳಸುತ್ತಿದ್ದರು. ಬ್ಲೌಸ್ ಗಳನ್ನು ಹೊಲಸುವಾಗ, ಬಾರ್ಡರ್ ಬರುತ್ತದಲ್ಲ ಅದನ್ನು ಬಳಸಿಕೊಂಡು ತೋಳಿಗೆ ಡಿಸೈನ್ ಅನ್ನು ಮಾಡುತ್ತಾರೆ. ಇದು ಇವಾಗ ಹೆಚ್ಚು ಟ್ರೆಂಡ್ ಆಗಿದೆ. ಬ್ಲೌಸ್ ಅನ್ನು ಆದರೆ ಮುಖ್ಯವಾಗಿ ತೋಳಿಗೆ, ಕೆಳಭಾಗದಲ್ಲಿ ಬಾರ್ಡರ್ ಬಂದು ಮೇಲಿನ ಭಾಗದಲ್ಲಿ ಬಫ್ ಬರುತ್ತದೆ. ಇದನ್ನು ನೋಡಲು ಬಹಳ ಆಕರ್ಷಕವಾಗಿದೆ.

ಬ್ಲೌಸ್ ಗಳಲ್ಲಿ ಫ್ರಿಲ್
ಫ್ರಿಲ್ ಎಂಬ ಪದವು ಹೊಸದೇನೂ ಅಲ್ಲ, ಇದು ಕೂಡ ಹಳೆಯದು. ಫ್ರಿಲ್ ಎಂಬುವುದು ಬ್ಲೌಸ್ ಮತ್ತು ಕುರ್ತಿಗಳಲ್ಲಿ ಕಂಡುಬರುತ್ತದೆ. ಫ್ರಿಲ್ ಬಂದು ದೊಡ್ಡ ಫ್ರಿಲ್ ಮತ್ತು ಚಿಕ್ಕ ಫ್ರಿಲ್ ಎಂದು ಇರುತ್ತದೆ. ಚಿಕ್ಕ ಫ್ರಿಲ್ ಒಂದೂವರೆಯಿಂದ(1.1/2) ಎರಡುವರೆ(2.1/2) ಇಂಚಿನ ತನಕ ಇರುತ್ತದೆ ಹಾಗೂ ದೊಡ್ಡ ಫ್ರಿಲ್ ಐದರಿಂದ(5) ಏಳು(7) ಇಂಚಿನ ತನಕ ಇರುತ್ತದೆ.


ಬೋಟ್ ನೆಕ್
ಬೋಟ್ ನೆಕ್ ಎಂದ ತಕ್ಷಣ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ಬೋಟನಿ ರೀತಿಯ ಶಿಪ್ ನಲ್ಲಿ ವಿನ್ಯಾಸಗೊಳಿಸಿರುತ್ತಾರೆ. ಈ ಬೋಟ್ ನೆಕ್ ಬಂದು ಬ್ಲೌಸ್ ಮತ್ತು ಕುರ್ತಿಗಳಲ್ಲಿ ಕಾಣಬಹುದು. ಇದು ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿದೆ.

ಕಾಲರ್ ನೆಕ್
ಇದು ಕೂಡ ಒಂದು ರೀತಿಯ ಉಡುಪಿನ ವಿನ್ಯಾಸವಾಗಿದೆ. ಕಾಲರ್ ನೆಕ್ ಬಂದು ಬ್ಲೌಸ್ ಮತ್ತು ಕುರ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಸಿದ್ಧತೆಯಲ್ಲಿ ಇತ್ತು. ಕಾಲರ್ ನೆಕ್ ನಲ್ಲಿ ಬಹಳಷ್ಟು ವಿಧಗಳಿವೆ.
ಅದರಲ್ಲಿ ಪ್ರಮುಖವಾದದ್ದು ಮೂರು. ಅದು ಯಾವುದು ಎಂದರೆ,
1) ಟೈ ಕಾಲರ್ ನೆಕ್
2) ಟೈ ಹೈ ಕಾಲರ್ ನೆಟ್
3) ಚೈನೀಸ್ ಕಾಲರ್ ನೆಕ್
ಮುಂತಾದವು
ಇದು ಮೂರು ಪ್ರಮುಖವಾದ ಕಾಲರ್ ನೆಕ್ ವಾಗಿದೆ. ಈ ಮೂರು ವಿನ್ಯಾಸವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಹೈ ನೆಕ್
ಹೈ ನೆಕ್ ಕೂಡ ಹಿಂದಿನ ಕಾಲದ ಡಿಸೈನ್ ಆಗಿದೆ. ಈ ಡಿಸೈನ್ ಇಂದಿನ ಕಾಲದ ಸಿನಿಮಾಗಳಲ್ಲೂ ಕೂಡ ಹೆಚ್ಚು ಪ್ರಚಲಿತದಲ್ಲಿತ್ತು. ಇದು ಇವಾಗ ಟ್ರೆಂಡ್ ಆಗಿದೆ. ಅನುಷ್ಕಾ ಶರ್ಮಾ ಕೂಡ ತನ್ನ ಮದುವೆಯ ರಿಸೆಪ್ಶನ್ ನಲ್ಲಿ ಬನಾರಸಿ ಸ್ಯಾರಿಯ ಜೊತೆ ಹೈ ನೆಕ್ ಬ್ಲೌಸ್ ಅನ್ನು ಧರಿಸಿದ್ದರು.
ಬಟ್ಟೆಯ ಡಾಬ್
ಡಾಬ್ ಎಂಬ ಪದವು ಎಲ್ಲರೂ ಕೂಡ ಕೇಳಿಯೇ ಇರುತ್ತಾರೆ. ಆದರೆ, ಇದೇನು ಬಟ್ಟೆಯ ಡಾಬು ಎಂದರೆ? ಡಾಬ್ ಸಹಜವಾಗಿ ಹೆಣ್ಣುಮಕ್ಕಳು ಸೀರೆಯ ಮೇಲೆ, ಲೆಹೆಂಗಾ ಮತ್ತು ಲಂಗ ದಾವಣಿಯ ಮೇಲೆ ಧರಿಸುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಚಿನ್ನದ ಡಾಬ್ ಹೋಗಿ ಬಟ್ಟೆಯ ಡಾಬ್ ಪ್ರಸಿದ್ಧತೆಯನ್ನು ಪಡೆದುಕೊಳ್ಳುತ್ತಿದೆ. ಬಟ್ಟೆಯಿಂದ ಡಾಬ್ ಅನ್ನು ತಯಾರಿಸುವಾಗ ಮಣಿಗಳು, ಚಮ್ಕಿ ವರ್ಕ್, ಲೇಸ್ ವರ್ಕ್, ಲಕ್ಷ್ಮಿ ಆನೆ ಮುಂತಾದಂತಹ ಆರ್ಟಿಫಿಶಿಯಲ್ ಡಿಸೈನ್ ಗಳನ್ನು ಹಾಕಿ ತಯಾರಿಸುತ್ತಾರೆ.

ಸಾರಿ ಕುಚ್
ಸಾರಿ ಕುಚ್ ಗಳು ಮೊದಲಿನಿಂದಲೂ ತುಂಬಾ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಇದರ ಮಾರ್ಕೆಟ್ ಸ್ಟಾಡಂ ಕಡಿಮೆಯಾಗಿಲ್ಲ. ಇದು ಮದುವೆಯ ಸೀಸನ್ ಬಂದರೆ ಇನ್ನೂ ಹೆಚ್ಚು ಡಿಮಾಂಡ್ ಗೆ ಒಳಪಡುತ್ತದೆ. ಸಾರಿ ಕುಚ್ ಎಂದರೆ, ತಿಳಿದೇ ಇರುತ್ತದೆ. ಸೀರೆಯ ಪಲ್ಲುವಿನ ತುದಿಯಲ್ಲಿ ಮೂಡಿಸುವಂತಹ ವೈವಿಧ್ಯಮಯವಾದ ವಿನ್ಯಾಸವಾಗಿದೆ.
ಇದರಲ್ಲಿ ಪ್ರಮುಖವಾದದ್ದು;
1) ಕ್ರೋಶ ಕುಚ್
2) ಎಂಬ್ರಾಯಿಡರಿ ಕುಚ್
3) ಬೇಬಿ ಕುಚ್
ಮತ್ತು
4) ಸ್ಟೋನ್ ಕುಚ್
ಮುಂತಾದವು.
ಇದರಲ್ಲಿ ಕ್ರೋಶ ಕುಚ್ ಹೆಚ್ಚು ಬೇಡಿಕೆಯಲ್ಲಿ ಇದೆ ಹಾಗೂ ಇದರ ಸಂಭಾವನೆಯೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಎಂಬ್ರಾಯಿಡರಿ ಕುಚ್ ಟ್ರೆಂಡಿಂಗ್ ನಲ್ಲಿ ಬರುತ್ತಿದೆ. ಹಾಗೂ ಇದರಲ್ಲಿ “ಹ್ಯಾಂಡ್ ವರ್ಕ್ ಮತ್ತು ಮಿಷಿನ್ ವರ್ಕ್” ಎಂದು ಎರಡು ವಿಧವಿದೆ. ಹ್ಯಾಂಡ್ ವರ್ಕ್ ಸ್ವಲ್ಪ ಎಕ್ಸ್ಪೆನ್ಸಿವ್ ಯಾಗಿದೆ.


ಕೊನೆಯದಾಗಿ,
ಎಂಬ್ರಾಯಿಡರಿ ವರ್ಕ್
ಎಂಬ್ರಾಯಿಡರಿ ವರ್ಕ್ ಇತ್ತೀಚಿಗೆ ಹೆಚ್ಚು ಪ್ರಸಿದ್ಧ ತೆಯನ್ನು ಪಡೆದುಕೊಳ್ಳುತ್ತಿದೆ. ಎಂಬ್ರಾಯಿಡರಿ ಎಂದರೆ ಹೆಚ್ಚಾಗಿ ಬ್ಲೌಸ್ ಗಳಿಗೆ ಮಾಡಿಸುತ್ತಾರೆ. ಎಂಬ್ರಾಯಿಡರಿ ವರ್ಕ್ನನ ಅಲ್ಲಿ ಎರಡು ವಿಧಗಳಿವೆ.
ಅದು ಯಾವುವು ಎಂದರೆ,
1) ಹ್ಯಾಂಡ್ ವರ್ಕ್
2) ಮಿಷಿನ್ ವರ್ಕ್
ಮೊದಲೇ ಹೇಳಿದ ಹಾಗೆ ಅಂಡ್ ವರ್ಕ್ ಹೆಚ್ಚು ಬೆಲೆಯಾಗುತ್ತದೆ. ಹಾಗೂ ಅದು ಮಾಡಲು ಕೂಡ ಹೆಚ್ಚು ಸಮಯ ಮತ್ತು ಶ್ರಮವಹಿಸಬೇಕಾಗುತ್ತದೆ.
ಕೊನೆಯದು ಎಂದ ತಕ್ಷಣ ಇದೇ ಕೊನೆಯದಲ್ಲ ನಾನು ಹೇಳಿದಂತಹ ಪ್ರಮುಖವಾದ ದಲ್ಲಿ ಕೊನೆಯದು. ಇನ್ನೂ ಹೆಚ್ಚು ಡಿಸೈನ್ಗಳು ಉಂಟು ಅದನ್ನು ಎರಡನೇ ಭಾಗದಲ್ಲಿ ವಿವರಿಸಲಾಗುತ್ತದೆ.

ಸಂಗ್ರಹಣೆ
ಛಾಯಾಚಿತ್ರಗಳು
1) The beauty Tailor shop
2) Sagar embroidery worker
3) Instagram
ಮುಂದುವರೆಯುತ್ತದೆ…