ಫ್ಯಾಶನ್ ಕ ಜಲ್ವ…

ಇಂದಿನ ಯುಗದಲ್ಲಿ ಫ್ಯಾಶನ್ ಎಂಬುವುದು ಒಂದು ಪದವಾಗಿ ಉಳಿದಿಲ್ಲ. ಫ್ಯಾಶನ್ ಎಂಬ ಪದವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ, ಅದು ಬಟ್ಟೆ, ಅಲಂಕಾರಿಕ ವಸ್ತು, ಹಾವಭಾವ ಮತ್ತು ತಮ್ಮ ಜೀವನ ಶೈಲಿಯಲ್ಲಿ ಆಗಿರಬಹುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ತನ್ನನ್ನು ಬೇರೆಯವರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ, ಎಲ್ಲರೂ ತಮ್ಮ ಜೀವನದಲ್ಲಿ ಫ್ಯಾಶನ್ ಅನ್ನು ಅಳವಡಿಸಿಕೊಂಡಿದ್ದಾರೆ.
ಹಿಂದಿನ ಕಾಲದ (80s-90s) ಜನರು ಹೆಚ್ಚು ಫ್ಯಾಷನ್ ಕಡೆ ಗಮನ ಹರಿಸುತ್ತಿರಲಿಲ್ಲ. ಅಂದರೆ, ಥೂ ಫ್ಯಾಶನ್ ಹರಿವು ಇಲ್ಲವೆಂದಲ್ಲ… ತುಂಬಾ ಹೆಚ್ಚಾಗಿ ನಟ-ನಟಿಯರು ಮತ್ತು ಪ್ರಸಿದ್ಧ (VIP) ವ್ಯಕ್ತಿಗಳು ಮಾತ್ರ ಹೆಚ್ಚು ಫ್ಯಾಶನ್ ಬಗ್ಗೆ ಒತ್ತನ್ನು ನೀಡುತ್ತಿದ್ದರು.
ಇಂದಿನ ಪೀಳಿಗೆಯವರು ಚಿಕ್ಕವಯಸ್ಸಿನಿಂದಲೇ, ಫ್ಯಾಶನ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ತಾನು ಸಮಾಜದ ಮುಂದೆ ಕಾಣಿಸಿಕೊಳ್ಳುವಾಗ ಎಲ್ಲರಿಗಿಂತ ಭಿನ್ನವಾಗಿ ಮತ್ತು ಆಕರ್ಷಕವಾಗಿ ಕಾಣಬೇಕು. ತಾವು ರುವಂತಹ ಉಡುಗೆ-ತೊಡುಗೆ ಯಿಂದ ಹಿಡಿದು ತಮ್ಮ ಹಾವಭಾವ ಹಾಗೂ ಮಾತನಾಡುವ ಶೈಲಿ ಯವರೆಗೂ ಸ್ಟೈಲಿಶ್ ಆಗಿರಬೇಕು ಎಂದು ಭಾವಿಸುತ್ತಾರೆ. ಸಿನಿಮಾ-ಕಿರುತೆರೆಯ ನಟ-ನಟಿಯರನ್ನು ಹೆಚ್ಚು ಅನುಸರಿಸುತ್ತಾರೆ. ಅವರು ಯಾವ ರೀತಿ ಬಟ್ಟೆಯನ್ನು ದರಿಸುತ್ತಾರೆ ಅದೇ ರೀತಿಯೇ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಹಾಗೂ ಯಾವ ಬ್ರಾಂಡಿನ ಪರ್ಫ್ಯೂಮ್, ಸ್ಯಾಂಡಲ್ಸ್, ಬ್ಯೂಟಿ ಪ್ರಾಡಕ್ಟ್ಸ್, ಹೇರ್ಕೇರ್ ಪ್ರಾಡೆಕ್ಟ್ ಮತ್ತು ಗ್ಯಾಜೆಟ್ ಗಳನ್ನು ಉಪಯೋಗಿಸಬೇಕು ಹಾಗೂ ಅವರ ರೀತಿಯೇ ಕಾಣಬೇಕು ಎನ್ನುತ್ತಾರೆ.

My perfume is, my attitude…,

ಪ್ರತಿಯೊಂದು ಪ್ರಾಡಕ್ಟ್ಸ್ ಗಳು ಹೆಚ್ಚಾಗಿ ನಟ-ನಟಿಯರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಹಾಗೂ ಅಡ್ವಟೈಸಿಂಗ್ ಸೆಕ್ಟರ್ ಗಳಿಗೆ ಬಳಸಿಕೊಳ್ಳುತ್ತಾರೆ. ಏಕೆಂದರೆ, ನಾವು ಮೊದಲೇ ಹೇಳಿದಂತೆ ಜನಸಾಮಾನ್ಯರು ಮತ್ತು ಯುವಜನತೆಗಳು, ನಟ-ನಟಿಯರನ್ನು ಹಿಂಬಾಲಿಸುವುದು ಹೆಚ್ಚು. ಇವರನ್ನು ನಾವು ನಮ್ಮ ಪ್ರಾಡಕ್ಟ್ಸ್ ಗಳ ಅಡ್ವಟೈಸಿಂಗ್ ನಲ್ಲಿ ಬಳಸಿಕೊಂಡರೆ ಹೆಚ್ಚು ಜನರು ನಮ್ಮ ಪ್ರಾಡಕ್ಟ್ ಗಳನ್ನು ಖರೀದಿಸುತ್ತಾರೆ ಎನ್ನುವ ಭಾವನೆ ಬಿಸಿನೆಸ್ ಸೆಕ್ಟರ್ ಗಳಲ್ಲಿ ಇಂದಿಗೂ ಇದೆ.

ರಂಪ್ ವಾಕ್ ಛಾಯಾಚಿತ್ರ

ಇನ್ನು ಮುಂದೆ ಬಂದರೆ, ಬ್ಯೂಟಿ ಪ್ರಾಡಕ್ಟ್ ಗಳು ನಮ್ಮ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಬ್ರಾಂಡ್ ಗಳು ಲಭ್ಯವಿದೆ. ಇದರ ಅಡ್ವಟೈಸಿಂಗ್ ನಲ್ಲಿ ಅಂತೂ ಹೆಚ್ಚಾಗಿ ನಟ-ನಟಿಯರನ್ನು ಹಾಗೂ ಮಾಡೆಲ್ ಗಳನ್ನು ಹಾಕಿಕೊಳ್ಳುತ್ತಾರೆ. ಬ್ಯೂಟಿ ಪ್ರಾಡಕ್ಟ್ ಗಳು ಎಂದ ತಕ್ಷಣ ಬರೀ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ, ಗಂಡಸರು ಕೂಡ ಬಳಸುತ್ತಾರೆ. ಮೊದಲೆಲ್ಲಾ ಬ್ಯೂಟಿ ಪ್ರಾಡಕ್ಟ್ ಎಂದರೆ ಬರೀ ಹೆಣ್ಣುಮಕ್ಕಳಿಗೆ ಮಾತ್ರ ಎಂದು ಇತ್ತು ಆದರೆ ಇಂದಿನ ಯುಗದಲ್ಲಿ ಹೆಣ್ಣುಮಕ್ಕಳು ಎಷ್ಟರಮಟ್ಟಿಗೆ ಬಳಸುತ್ತಾರೆ ಅದರ ಸರಿಸಮಾನವಾಗಿ ಗಂಡು ಮಕ್ಕಳು ಕೂಡ ಬಳಸುತ್ತಾರೆ. ಮಾರ್ಕೆಟಿನಲ್ಲಿ ಇಬ್ಬರಿಗೂ ಪ್ರಾಡಕ್ಟ್ ಗಳು ಲಭ್ಯವಿದೆ‌. ಇತ್ತೀಚಿಗಂತೂ ಗಂಡಸರು ತಮ್ಮ ಬ್ಯೂಟಿ ಬಗ್ಗೆ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ, ಫೇಸ್ ಕ್ರೀಂ ನಿಂದ ಹಿಡಿದು ಆಕ್ನಿ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಎಲ್ಲರೂ ಬ್ಯೂಟಿ ಪ್ರಾಡಕ್ಟ್ ಗಳಿಂದ ತಮ್ಮದೇ ಆದ ಫ್ಯಾಷನ್ನು ಮಾಡುತ್ತಿದ್ದಾರೆ ಹಾಗೂ ಚಾಪು ಮೂಡಿಸಿದ್ದಾರೆ.

ಮೇಕಪ್ ಪ್ರಾಡಕ್ಟ್ ಫೋಟೋ

Be happy with you’re self, Don’t care who speaks about you whatever…,

ನಾವು ತೊಡುವಂತಹ ಬಟ್ಟೆಗಳಲ್ಲೂ ಕೂಡ ಫ್ಯಾಷನ್ ಇರುತ್ತದೆ. ಫ್ಯಾಶನ್ ಎಂದ ತಕ್ಷಣ ಮೊದಲು ಎಲ್ಲರ ತಲೆಯಲ್ಲಿ ಬರುವುದು ಬಟ್ಟೆಗಳು ಅಥವಾ ಉಡುಗೆಗಳು. ಡ್ರೆಸ್ಸಿಂಗ್ ಸ್ಟೈಲ್ ಎಂಬುದು ಅವರವರ ಆಯ್ಕೆ. ಯಾರು ಕೂಡ ಎಂದಿಗೂ ನೀವು ಯಾಕೆ ಈ ರೀತಿ ಬಟ್ಟೆಯನ್ನು ಕೊಡುತ್ತಿದ್ದೀರಾ ಎಂಬುವ ಪ್ರಶ್ನೆಯನ್ನು ಪ್ರಶ್ನಿಸಬಾರದು. ಕೆಲವರಿಗೆ ಪ್ರೆಸ್ಟನ್ ವೇರ್ ಇಷ್ಟವಾದರೆ, ಇನ್ನು ಕೆಲವರಿಗೆ ಟ್ರೆಡಿಷನಲ್ ವೇರ್ (ಸಾಂಪ್ರದಾಯಿಕ ಉಡುಪು) ಇಷ್ಟವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ತಮ್ಮ ಹೊಸ ಔಟ್-ಫಿಟ್ ಮತ್ತು ಲುಕ್ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸೆಲಿಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರು ಕೂಡ ತಮ್ಮ ವೈವಿಧ್ಯಮಯವಾದ ಫೋಟೋ ಮತ್ತು ವಿಡಿಯೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಇಷ್ಟ ಪಡುತ್ತಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಉಡುಗೆ-ತೊಡುಗೆ ಬಗ್ಗೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ, ಇದನ್ನು ಯಾರು ಕೂಡ ಮಾಡಬಾರದು.

ವೈವಿಧ್ಯಮಯ ಉಡುಪಿನ ವಿನ್ಯಾಸ

My Dress, My Style
My life, My choice…

ಫ್ಯಾಶನ್ ಎಂಬುವುದು ಎಲ್ಲರ ಮೇಲೆ ಎಷ್ಟರಮಟ್ಟಿಗೆ ಮೋಡಿ ಮಾಡಿದೆ ಎಂದು ಹೇಳಲು ಪದಗಳು ಸಾಲದು…

ಸಂಗ್ರಹಣೆ
ಛಾಯಾಚಿತ್ರಗಳು
1)https://www.vogue.com/article/what-is-the-future-of-the-fashion-show
2)Google

@thebeautyoffashion053

Leave a comment

Design a site like this with WordPress.com
Get started